ಬೀದಿನಾಯಿಗಳನ್ನು ಓಡಿಸುವ ವೇಳೆ ಬಿದ್ದು ವೃದ್ದೆ ಮೃತ್ಯು

ಬೋವಿಕ್ಕಾನ: ನಿರ್ಮಾಣ ಹಂತದ ಮನೆ ಬಳಿ ಕಂಡುಬಂದ ಬೀದಿ ನಾಯಿಗಳನ್ನು ಓಡಿಸುವ ವೇಳೆ ವೃದ್ದೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಲ್ಲ ಬಳಿಯ ಅಮ್ಮಂಗೋಡು ನಿವಾಸಿ ದಿ| ಕುಂಞಂಬು ನಾಯರ್‌ರ ಪತ್ನಿ ತುಳಿಚ್ಚೇರಿ ಕಾರ್ತ್ಯಾಯಿನಿ ಅಮ್ಮ (82) ಮೃತಪಟ್ಟ ದುರ್ದೈವಿ ಯಾಗಿದ್ದಾರೆ.

ಮೊನ್ನೆ ರಾತ್ರಿ ನಿರ್ಮಾಣ ನಡೆಯುತ್ತಿರುವ ಮನೆ ಸಮೀಪದಿಂದ ಬೀದಿನಾಯಿಗಳನ್ನು ಓಡಿಸಲೆತ್ನಿಸಿದಾಗ ಕಾರ್ತ್ಯಾಯಿನಿ ಅಮ್ಮ ಬಿದ್ದಿದ್ದರೆನ್ನಲಾಗಿದೆ. ಶಬ್ದ ಕೇಳಿ ಪುತ್ರಿ ಲಕ್ಷ್ಮಿ ಅಲ್ಲಿಗೆ ತಲುಪಿ ನೋಡಿದಾಗ ತಾಯಿ ಬಿದ್ದಿದ್ದರು. ಕೂಡಲೇ ನೆರೆಮನೆಯವರ ಸಹಾಯದಿಂದ ಚೆರ್ಕಳದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಮಕ್ಕಳಾದ ಬಾಲಕೃಷ್ಣನ್ ನಾಯರ್,  ಲಕ್ಷ್ಮಿ, ರಾಜನ್, ಚಂದ್ರನ್, ಮುರಳೀಧರನ್, ಲೀಲಾಮಣಿ,  ಅಳಿಯ, ಸೊಸೆಯಂದಿರಾದ ವಿಜಯನ್ ಕುಂಡಂಕುಳಿ, ಶಾಂತ, ಧನ್ಯ, ಸುಮ, ಸುಧಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page