ಬೆಳ್ಳೂರು: ವ್ಯಾಪಾರಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬೆಳ್ಳೂರು: ನಾಟೆಕಲ್ಲಿನಲ್ಲಿ ವ್ಯಾಪಾರಿಯೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನೆಟ್ಟಣಿಗೆ ಕಚ್ಚೇರಿ ಎಂಬಲ್ಲಿನ ದಿವಂಗತರಾದ ಕುಂಞಿಕಣ್ಣನ್ ಚೆಟ್ಟಿಯಾರ್-ಕೊರಪ್ಪಾಳು ದಂಪತಿಯ ಪುತ್ರ ಭಾಸ್ಕರ (೫೦) ಮೃತಪಟ್ಟ ವ್ಯಕ್ತಿ.  ನಾಟೆಕಲ್ಲಿನಲ್ಲಿ ವ್ಯಾಪಾರಿಯಾಗಿದ್ದ ಭಾಸ್ಕರ ಇಲ್ಲಿಗೆ ಸಮೀಪದ ಕಲೆರಿ ಎಂಬಲ್ಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು.

ಮೊನ್ನೆ ರಾತ್ರಿ ನೆಟ್ಟಣಿಗೆಯ ಮನೆಗೆ ತೆರಳಿದ್ದ ಅವರು ಮರಳಿ ಕ್ವಾರ್ಟರ್ಸ್‌ಗೆ ಬಂದಿದ್ದರು. ನಿನ್ನೆ   ಬೆಳಿಗ್ಗೆ ಕ್ವಾರ್ಟರ್ಸ್‌ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮಾಲಕರು ಕಿಟಿಕಿ ಮೂಲಕ ನೋಡಿದಾಗ ಕೊಠಡಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಭಾಸ್ಕರ ಪತ್ತೆಯಾಗಿದ್ದಾರೆ. ಆದೂರು ಪೊಲೀಸರು ತಲುಪಿ ಮೃತದೇಹವನ್ನು ಮಹಜರು ನಡೆಸಿದರು.ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನೆಟ್ಟಣಿಗೆಯ ಸ್ವ-ಗೃಹಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಸಹೋದರರಾದ ಬಾಬು, ಕೃಷ್ಣ, ಗೋಪಾಲ, ಚಂದ್ರಶೇಖರ, ವಸಂತ, ಸಹೋದರಿ ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಶಾರದಾ ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page