ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್‌ಗೆ ಇಂದು ಸಂಜೆ ಚಾಲನೆ

ಕಾಸರಗೋಡು: ಬೇಕಲ ಬೀಚ್‌ನಲ್ಲಿ ನಡೆಯುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್‌ನ್ನು ಇಂದು ಸಂಜೆ ೬ ಗಂಟೆಗೆ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ   ರಾಜ್ಯ ವಿಧಾನಸಭಾ ಸ್ಪೀಕರ್ ಎ.ಎನ್. ಶಂಶೀರ್ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡುವರು. ಉದ್ಘಾಟನಾ ಸಮಾರಂಭದ ಬಳಿಕ ತೈಕುಡಂ ಬ್ರಿಡ್ಜ್ ಇದರಿಂದ ಮೆಘಾ ಮ್ಯೂಸಿಕ್ ಶೋ ನಡೆಯಲಿದೆ. ಫೆಸ್ಟ್ ಡಿಸೆಂಬರ್ ೩೧ರ ತನಕ ಮುಂದುವರಿ ಯಲಿದೆ. ಅಂದು ರಾತ್ರಿ ೧೨ಗಂಟೆಗೆ ಹೊಸ ವರ್ಷಕ್ಕೆ ಸ್ವಾಗತ ನೀಡುವ ಆಕರ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫೆಸ್ಟ್‌ನ ಪ್ರವೇಶ ಶುಲ್ಕವನ್ನು ೧೦೦ ರೂ. ಆಗಿ ನಿಗದಿಪಡಿಸಲಾಗಿದೆ.

ಫೆಸ್ಟ್‌ನ  ಅಂಗವಾಗಿ  ನಾಳ ಪ್ರಧಾನ ವೇದಿಕೆಯಲ್ಲಿ ಶಿವಮಣಿ, ಪ್ರಕಾಶ್  ಉಳ್ಳೋರಿ, ಮತ್ತು ಶರತ್ ನೇತೃತ್ವ ನೀಡುವ ಮ್ಯೂಸಿಕಲ್ ಪ್ಯೊಷನ್ ಟ್ರಿಯೋ, ೨೪ರಂದು ಚಲನಚಿತ್ರ ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ಮತ್ತು ತಂಡದಿಂದ ಹಾಗೂ ೨೫ರಂದು ಚಲನಚಿತ್ರ ಹಿನ್ನೆಲೆ ಗಾಯಕ ಎಂ.ಜಿ. ಶ್ರೀಕುಮಾರ್ ಮತ್ತು ತಂಡದಿಂದ ಮೆಘಾ ಮ್ಯೂಸಿ ಕಲ್ ಇವೆಂಟ್ ಕೂಡಾ ನಡೆಯಲಿದೆ.

೨೬ರಂದು ಸಂಜೆ ಖ್ಯಾತ ಸಿನಿಮಾ ನಟಿ ಹಾಗೂ ನೃತ್ಯ ಕಲಾವಿದೆಯಾಗಿರುವ ಶೋಭನಾ ಅವರಿಂದ ನೃತ್ಯ ಕಾರ್ಯಕ್ರಮ ಪ್ರದರ್ಶಿಸಲ್ಪಡಲಿದೆ. ೨೭ರಂದು ಪದ್ಮಕುಮಾರ ಮತ್ತು ತಂಡದಿಂದ ಓಲ್ಡ್ ಈಸ್ ಗೋಲ್ಡ್ ಮ್ಯೂಸಿಕ್ ಮೆಲೋಡಿ, ೨೮ರಂದು ಅತುಲ್ ನರುಕರರಿಂದ ಸೋಲ್ ಆಫ್ ಪೋಕ್ ಕಾರ್ಯಕ್ರಮ ನಡೆಯಲಿದೆ. ೨೯ರಂದು ಕಣ್ಣೂರು ಶರೀಫ್ ಮತ್ತು ತಂಡದಿಂದ ಮಾಪಿಳ್ಳಪಾಟ್, ೩೦ರಂದು ಗೌರಿಲಕ್ಷ್ಮಿ ಮ್ಯೂಸಿಕಲ್ ಬ್ಯಾಂಡ್ಸ್ ಮತ್ತು ಕೊನೆಯ ದಿನವಾದ ೩೧ರಂದು ರಾಸಾ ಬೀಗಂರಿಂದ ಗಜಲ್ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ ಆಟ್ಟಂ ಕಲಾ ಸಮಿತಿ ಮತ್ತು ತೆಕ್ಕಿಲ್‌ಕಾಡ್ ಬ್ರ್ಯಾಂಡ್ಸ್‌ನಿಂದ ಹೊಸ ವರ್ಷ ಆಚರಣೆ ಕಾರ್ಯಕ್ರಮ ನಡೆಯಲಿದೆ. ಎರಡು ವೇದಿಕೆಗಳಲ್ಲಾಗಿ ಕಾರ್ಯಕ್ರಮಗಳು ನಡೆಯಲಿವೆ. 

Leave a Reply

Your email address will not be published. Required fields are marked *

You cannot copy content of this page