ಬೇಡಗಂನಲ್ಲಿ ಯುವಕ ಹಾಗೂ ಪೊಲೀಸ್‌ಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳನ್ನು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹ

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಾಡ್ ಅರಿಚ್ಚೆಪ್ಪು ಎಂಬಲ್ಲಿ ಅಧ್ಯಾಪಕ ದಂಪತಿಗಳಿಗೆ ಹಲ್ಲೆಗೈಯ್ಯಲು ಯತ್ನಿಸಿದ ವಿಷಯ ತಿಳಿದು ತಲುಪಿದ ಯುವಕ ಹಾಗೂ ಪೊಲೀಸ್‌ನನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸ ಲಾಯಿತು. ಅರಿಚ್ಚೆಪ್ಪು ಪುಳಿಕ್ಕಾಲ್ ಹೌಸ್‌ನ ಜಿಷ್ಣು ಸುರೇಶ್ ಯಾನೆ ಸುರೇಶ್ (24), ಸಹೋದರ ವಿಷ್ಣು ಸುರೇಶ್ (25) ಎಂಬಿವರಿಂದ ಬೇಡಗಂ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ಅವರ ನೇತೃತ್ವದಲ್ಲಿ ಮಾಹಿತಿ ಸಂಗ್ರಹಿಸಲಾಯಿತು.

ಘಟನೆ ನಡೆದ ಸ್ಥಳ, ಆರೋಪಿಗಳ ಮನೆ, ಬಟ್ಟೆಬರೆ ಬದಲಾಯಿಸಲಾಯಿತೆಂದು ಹೇಳಲಾಗುವ ಸ್ಥಳ, ಘಟನೆ ಬಳಿಕ ಪರಾರಿಯಾದ ದಾರಿಗಳು ಎಂಬೆಡೆಗಳಿಗೆ ಆರೋಪಿಗಳನ್ನು ಕೊಂಡೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಕೊಲೆಯತ್ನಕ್ಕೆ ಬಳಸಿದ ಚಾಕುವನ್ನು ಘಟನೆ ದಿನದಂದೇ ಪತ್ತೆಹಚ್ಚಲಾಗಿತ್ತು.

ಎಪ್ರಿಲ್ ೧೯ರಂದು ರಾತ್ರಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕೊರತ್ತಿಕುಂಡ್‌ನ ಅಧ್ಯಾಪಕ ದಂಪತಿಗಳ ಮನೆಗೆ ತಲುಪಿದ ಸಹೋದರರು ದಾಂಧಲೆ ನಡೆಸಿ ಬೆದರಿಕೆಯೊಡ್ಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯ ತಿಳಿದು ತಲುಪಿದ ನೆರೆಮನೆ ನಿವಾಸಿಯಾದ ಸರೀಶ್ ಹಾಗೂ ಬೇಡಗ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಸೂರಜ್ ಎಂಬಿವರಿಗೆ ಇರಿದು ಗಾಯಗೊಳಿ ಸಿರುವುದಾಗಿ ಆರೋಪಿ ಗಳ ವಿರುದ್ಧ ಕೇಸು ದಾಖಲಿಸಲಾಗಿದೆ.

ಘಟನೆ ಬಳಿಕ ತಲೆಮರೆ ಸಿಕೊಂಡಿದ್ದ ಆರೋಪಿಗಳನ್ನು ಮೇ ೪ರಂದು ಕನ್ಯಾಕುಮಾರಿಯ ಲಾಡ್ಜ್‌ನಿಂದ ಪೊಲೀಸರು ಸೆರೆ ಹಿಡಿದಿದ್ದರು. ಬೇಡಗಕ್ಕೆ ತಲುಪಿಸಿ ಆರೋಪಿಗಳ ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿತ್ತು.  ಈ ಇಬ್ಬರನ್ನು ಗುರುವಾರ ಪೊಲೀಸರು ಕಸ್ಟಡಿಗೆ ತೆಗೆದು ಮಾಹಿತಿ ಸಂಗ್ರಹಿಸಿದ್ದಾರೆ.

You cannot copy contents of this page