ಬೈಕ್ ಢಿಕ್ಕಿ ಹೊಡೆದು ಬಾಲಕನಿಗೆ ಗಂಭೀರ
ಮಂಜೇಶ್ವರ: ಬೈಕ್ ಡಿಕ್ಕಿ ಹೊಡೆದು ಮದ್ರಸ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಾಳ್ಯೂರು ನಿವಾಸಿ ಮೆಹಮೂದ್ ಎಂಬವರ ಪುತ್ರ ಮೊಹಮ್ಮದ್ ಮುವಾಜ್ [6] ನನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ಬೆಳಿಗ್ಗೆ ಬಾಳ್ಯೂರುನಲ್ಲಿ ಮದ್ರಸ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಮೀಯಪದವು ಭಾಗದಿಂದ ಆಗಮಿಸಿದ ಬೈಕ್ ಡಿಕ್ಕಿಹೊಡೆದಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆ ಶಸ್ತç ಚಿಕಿತ್ಸೆ ನಡೆಸಲಾಗಿದೆ. ಅಪಘಾತ ಉಂಟÁದರೂ ಸವಾರ ನಿಲ್ಲಿಸದೆ ಹೋಗಿರುವುದಾಗಿ ಹೇಳಲಾಗುತ್ತಿದೆ. ಅಪಘಾತದ ಇಲ್ಲಿನ ದೃಶ್ಯ ಸಿಸಿಯಲ್ಲಿ ಪತ್ತೆಯಾಗಿದೆ.