ಬೈಕ್ ಢಿಕ್ಕಿ ಹೊಡೆದು ಸ್ಕೂಟರ್ ಚಲಾಯಿಸುತ್ತಿದ್ದ ಯುವತಿಗೆ ಗಾಯ
ಕಾಸರಗೋಡು: ಬೈಕ್ ಸ್ಕೂಟರ್‌ಗೆ ಢಿಕ್ಕಿ ಹೊದೆಡು ಸ್ಕೂಟರ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಪಾಡಿ ಪೂಚ್ಚಾಲ್ ವೀಟಿಲ್‌ನ ಎಂ.ಎನ್. ವಿನೋದ್ ಎಂಬವರ ಪತ್ನಿ ಎಂ. ಸುಮಿತ್ರ (37) ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನ.19 ರಂದು ಸಂಜೆ ಪಾಡಿ ಎದಿರ್ ತ್ತೋಡಿನಲ್ಲಿ ಈ ಅಪಘಾತ ಸಂಭವಿಸಿದೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.