ಬೆಂಗಳೂರು: ಸೋಮವಾರ ಹಾಗೂ ಮಂಗಳವಾರ ನಡೆಸಲು ನಿಶ್ಚಯಿಸಿದ್ದ ಅಖಿಲ ಭಾರತ ಬ್ಯಾಂಕ್ ಕೆಲಸ ಸ್ಥಗಿತ ಮುಷ್ಕರವನ್ನು ಮುಂದೂಡಲಾಗಿದೆ. ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೆಲಸ ಸ್ಥಗಿತ ಮುಷ್ಕರ ಘೋಷಿಸಿತ್ತು.
ಲೇಬರ್ ಕಮಿಷನರ್‌ರೊಂದಿಗೆ ನಡೆಸಿದ ಚರ್ಚೆಯ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತ ಮುಷ್ಕರವನ್ನು ಮುಂದೂಡಲಾಗಿದೆ. ಕೆಲಸದ ದಿನ ವಾರಕ್ಕೆ ೫, ನೇಮಕಾತಿ ಪಿಎಲ್‌ಐ ಎಂಬಿವು ಸಹಿತವಿರುವ ಪ್ರಧಾನ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿರುವುದಾಗಿ ಯುಎಫ್ ಬಿಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್, ಫಿನಾನ್ಶಿಯಲ್ ಸರ್ವೀಸಸ್ ಇಲಾಖೆ ಎಂಬಿವುಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗ ವಹಿಸಿದರು. ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು, ಬ್ಯಾಂಕಿಂಗ್ ವಲಯದಲ್ಲಿ ಅನ್ಯಾಯ ವಾಗಿರುವ ಕೆಲಸದ ರೀತಿಗಳನ್ನು ಕೊನೆಗೊಳಿ ಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಆಹ್ವಾನ ನೀಡಲಾಗಿತ್ತು.