ಬ್ರಹ್ಮಶ್ರೀ ನಾರಾಯಣನ್ ಪದ್ಮನಾಭನ್ ಮರುದಂಪಾಡಿತ್ತಾಯರ್ ನಿಧನ
ಕಾಸರಗೋಡು: ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದ ಪೆರಿಯ ನಂಬಿಯವರಾಗಿದ್ದ ಪುಲ್ಲೂರು ವಿಷ್ಣುಮಂಗಲಂ ಮರುದಂಪಾಡಿ ಇಲ್ಲಂ ನಿವಾಸಿ ನಾರಾಯಣನ್ ಪದ್ಮನಾಭನ್ (64) ನಿಧನ ಹೊಂದಿದರು. ಹೃದಯಾಘಾತದಿಂದ ನಿನ್ನೆ ರಾತ್ರಿ 11.30ರ ವೇಳೆ ನಿಧನ ಸಂಭವಿಸಿದೆ. ಸ್ನಾನಗೃಹದಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದ ಇವರನ್ನು ಕೂಡಲೇ ಮಾವುಂಗಾಲ್‌ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಜೀವ ಉಳಿಸಲು ಸಾಧ್ಯ ವಾಗಲಿಲ್ಲ. ಏಟುಮಾನೂರ್ ಮಹಾ ದೇವ ಕ್ಷೇತ್ರ, ಕುಮಾರನೆಲ್ಲೂರ್ ದೇವಿ ಕ್ಷೇತ್ರ, ಆಯಂಬಾರ ಶ್ರೀ ಮಹಾ ವಿಷ್ಣು ಕ್ಷೇತ್ರಗಳಲ್ಲಿ ಅರ್ಚಕರಾಗಿದ್ದರು.
೨೦೦೮ರಿಂದ ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ಸೇವೆ ಗೈಯ್ಯುತ್ತಿದ್ದರು. ಉತ್ತಮ ಕೃಷಿಕನಾದ ಇವರಿಗೆ ಪುಲ್ಲೂರು ಪೆರಿಯ ಪಂಚಾಯತ್ ಉತ್ತಮ ಕೃಷಿಕನಿಗಿರುವ ಕರ್ಷಕಶ್ರೀ ಪುರಸ್ಕಾರ ಪ್ರದಾನ ಮಾಡಲಾಗಿತ್ತು.
ಮೃತರು ಪತ್ನಿ ಉಷಾ ಅಂತ ರ್ಜನಂ, ಮಕ್ಕಳಾದ ಕಿಶೋರ್ ನಾರಾಯಣನ್, ಪದ್ಮಕುಮಾರ್, ಸೊಸೆ ಕೃಷ್ಣಪ್ರಿಯ, ಸಹೋದರರಾದ ಕೇಶವನ್ ಅಂಜನಂತೋಡಿ ತ್ತಾಯರ್, ಶಿವದಾಸ್ ಮರುದಂ ಪಾಡಿತ್ತಾ ಯರ್, ಸತ್ಯನ್ ಮರು ದಂಪಾಡಿ ತ್ತಾಯರ್, ಶ್ರೀರಾಮನ್ ಮರುದಂ ಪಾಡಿತ್ತಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.