ಭಯೋತ್ಪಾದಕ ದಾಳಿ ಖಂಡಿಸಿ ಬದಿಯಡ್ಕದಲ್ಲಿ ವಿ.ಹಿಂ.ಪ ಪ್ರತಿಭಟನೆ

ಬದಿಯಡ್ಕ: ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ನಡೆಸಿದ ಉಗ್ರಗಾಮಿಗಳ ವಿರುದ್ಧ ವಿಶ್ವಹಿಂದೂ ಪರಿಷತ್, ಭಜರಂಗದಳ ಬದಿಯಡ್ಕ ಇದರ ನೇತೃತ್ವದಲ್ಲಿ ಪ್ರತಿ ಭಟನಾ ಮೆರವಣಿಗೆ ನಡೆಸಲಾಯಿತು. ಬದಿಯಡ್ಕ ಗಣೇಶ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಹರೀಶ್ ನಾರಂಪಾಡಿ ಮಾತನಾಡಿ ಭಯೋ ತ್ಪಾದಕ ಸಂಘಟನೆಗಳ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕು. ಪಶ್ಚಿಮ ಬಂಗಾಲ,  ಕಾಶ್ಮೀರದಲ್ಲಿ ಈಗ ಕಂಡುಬರುತ್ತಿರುವ ದಾಳಿ ನಾಳೆ ನಮ್ಮ ಕಾಲಬುಡಕ್ಕೂ ಬರಲು ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ  ಭಾರತದ ಮುಸ್ಲಿಂ ಸಮುದಾಯ ದೇಶದ ಜನರ ರಕ್ಷಣೆಗಾಗಿ ಸೆಟೆದು ನಿಲ್ಲಬೇಕು ಎಂದರು. ಎಂ. ಸುಧಾಮ ಗೋಸಾಡ, ಸಂಕಪ್ಪ ಭಂಡಾರಿ, ಸುನಿಲ್ ಕಿನ್ನಿಮಾಣಿ, ಸುರೇಶ್ ಶೆಟ್ಟಿ ಪರಂಕಿಲ, ಹರಿಪ್ರಸಾದ್ ರೈ ಪುತ್ರಕಳ, ಸಂತೋಷ್ ಗಾಡಿಗುಡ್ಡೆ, ಶ್ರೀಧರ ಬೆಳ್ಳೂರು, ಗೋಪಾಲಕೃಷ್ಣ ಮುಂಡೋಳುಮೂಲೆ, ತೇಜಸ್ವಿ ಹೇರಳ, ರೂಪೇಶ್ ಬದಿಯಡ್ಕ, ಅವಿನಾಶ್ ರೈ, ರವಿ ಬಿಎಂಎಸ್,  ಬಾಲಕೃಷ್ಣ ಶೆಟ್ಟಿ ಕಡಾರು, ಮೈರ್ಕಳ ನಾರಾಯಣ ಭಟ್, ಭಾಸ್ಕರ ಬದಿಯಡ್ಕ ಮಾತನಾಡಿದರು. ಮಂಜುನಾಥ ಮಾನ್ಯ ಸ್ವಾಗತಿಸಿ, ಗಣೇಶ್ ಮಾವಿನಕಟ್ಟೆ ವಂದಿಸಿದರು.

You cannot copy contents of this page