ಮಕ್ಕಳನ್ನು ಉಪೇಕ್ಷಿಸಿ ಊರು ಬಿಟ್ಟ ಯುವತಿ, ಪ್ರಿಯತಮ ಸೆರೆ
ಕಾಸರಗೋಡು: ಪ್ರಾಯಪೂ ರ್ತಿಯಾಗದ ಮಕ್ಕಳನ್ನು ಉಪೇಕ್ಷಿಸಿ ಊರು ಬಿಟ್ಟ ಯುವತಿಯನ್ನು ಆಕೆಯ ಪ್ರಿಯತಮನ ಸಹಿತ ಚಂದೇರ ಪೊಲೀಸರು ಸೆರೆ ಹಿಡಿದಿದ್ದಾರೆ. ಪಡನ್ನ ಕಾವುಂತಾಲಿನ ಟಿ.ಕೆ. ಹಸೀನಾ (೩೩) ಮತ್ತು ಎ.ಕೆ. ಅಬ್ದುಲ್ ಸಮದ್ (೪೦) ಬಂಧಿತರಾದ ಜೋಡಿಗಳು. ಚಂದೇರಾ ಪೊಲೀಸ್ ಠಾಣೆಯ ಎಸ್‌ಐ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಈ ತಿಂಗಳ ೬ರಂದು ಹಸೀನಾ ನಾಪತ್ತೆಯಾಗಿದ್ದಳೆಂದು ದೂರಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಸೈಬರ್ ಸೆಲ್‌ನ ಸಹಾ ಯದೊಂದಿಗೆ ತನಿಖೆ ನಡೆಸಿದಾಗ ಆಕೆ ಪ್ರಿಯತಮ ನೊಂದಿಗೆ ಎರ್ನಾಕುಳಂ ಮತ್ತು ವಯನಾಡು ಮೊದಲಾದೆ ಡೆಗಳಲ್ಲಿ ಉಳಿದುಕೊಂಡಿದ್ದರೆಂಬ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ನಡೆಸಿದ ಶೋಧದಲ್ಲಿ ಅವರಿಬ್ಬರನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳ ಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.