ಮಕ್ಕಳೊಂದಿಗೆ ಯುವತಿ ನಾಪತ್ತೆ: ಪೊಲೀಸರಿಂದ ತನಿಖೆ ತೀವ್ರ
ಕಾಸರಗೋಡು: ಶೇಣಿ ಪಟ್ಲದಿಂದ ನಾಪತ್ತೆಯಾದ ಯುವತಿ ಹಾಗೂ ಮಕ್ಕಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಚಿತ್ರಕಲಾ (37) ಹಾಗೂ 14, 3 ವರ್ಷ ಪ್ರಾಯದ ಇಬ್ಬರು ಮಕ್ಕಳು ಮೇ 31ರಿಂದ ನಾಪತ್ತೆಯಾಗಿದ್ದರು. ಅಂದು ಬೆಳಿಗ್ಗೆ 11.15ಕ್ಕೆ ಪೆರ್ಲಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಹಿಂತಿರುಗದ ಹಿನ್ನೆಲೆಯಲ್ಲಿ ಪತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಮಕ್ಕಳು ಕರ್ನಾಟಕದಲ್ಲಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲಾಗಿದೆ.