ಮಜೀರ್ಪಳ್ಳಕಟ್ಟೆ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ
ಬದಿಯಡ್ಕ: ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಆಶ್ರಯದಲ್ಲಿ ಮಜೀರ್ಪಳ್ಳಕಟ್ಟೆ ೧ನೇ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಿಸ ಲಾಯಿತು. ಪೆರಿಯಾಟಡ್ಕದಲ್ಲಿ ನಡೆದ ಸಭೆಯನ್ನು ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಅವರು ಮಾತನಾಡಿ, ಮುಂಬರುವ ತ್ರಿಸ್ತರ ಪಂಚಾಯತ್ ಚುನಾವಣೆಗೆ ಪಕ್ಷದ ನೇತಾರರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.
ವಿಲ್ಫ್ರೆಡ್ ಮನೋಹರ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಮಂಡಲ ಉಪಾಧ್ಯಕ್ಷ ಕೃಷ್ಣದಾಸ್ ಬೇಳ, ಕಾರ್ಯದರ್ಶಿ ಲೋಹಿತಾಕ್ಷ ನಾಯರ್, ಮಂಡಲ ಪದಾಧಿ ಕಾರಿಗಳಾದ ವಾಮನ, ಜೋನಿ ಕಾರ್ಮಾರು, ಜೋಸೆಫ್ ಬೇಳ ಮೊದಲಾದವರು ಮಾತನಾಡಿದರು. ನೂತನ ವಾರ್ಡ್ ಸಮಿತಿಗೆ ಅಧ್ಯಕ್ಷರಾಗಿ ಗಿಲ್ಬರ್ಟ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಬೇಳ, ಕಿಶೋರಿ ಡಿಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ವಿಲ್ಫ್ರೆಡ್ ಮನೋಹರ್ ಕ್ರಾಸ್ತಾ, ಕಾರ್ಯ ದರ್ಶಿಗಳಾಗಿ ಥೋಮಸ್ ರೋಡ್ರಿಗಸ್, ಅನಿಲ್ ಕ್ರಾಸ್ತಾ, ಕೋಶಾಧಿಕಾರಿಯಾಗಿ ಡೇವಿಡ್ ಡಿಸೋಜಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿನ್ಸೆಂಟ್ ಕ್ರಾಸ್ತಾ, ರೋಬರ್ಟ್ ಕ್ರಾಸ್ತಾ, ಪ್ರಕಾಶ್ ರೋಡ್ರಿಗಸ್, ಗೋಪಾಲ ಡಿ, ಪ್ರವೀಣ್ ಕ್ರಾಸ್ತಾ, ಕೃಷ್ಣ ದರ್ಬೆತ್ತಡ್ಕ, ಉಷಾಕಿರಣ, ಸುಂದರ ಡಿ, ಥೋಮಸ್ ಕ್ರಾಸ್ತಾ, ಥೋಮಸ್ ವಿಲ್ಸನ್, ಕೃಷ್ಣದಾಸ್ ಬೇಳ ಎಂಬಿವ ರನ್ನು ಆಯ್ಕೆ ಮಾಡಲಾಯಿತು. ಅನಿಲ್ ಕ್ರಾಸ್ತಾ ಸ್ವಾಗತಿಸಿ, ಜೋಸೆಫ್ ಕ್ರಾಸ್ತಾ ವಂದಿಸಿದರು.