ಮತದಾರ ಯಾದಿ ಪ್ರಕರಣದ ತೀರ್ಪು ನಾಳೆ
ಕಾಸರಗೋಡು: ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಅಡಚಣೆ ಉಂಟು ಮಾಡಿದ ಪ್ರಕರಣದ ತೀರ್ಪನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨) ನಾಳೆ ನೀಡಲಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲ್ಪಟ್ಟಿದ್ದಾರೆ. ೨೦೧೦ರಲ್ಲಿ ಜನವರಿಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿಯಲ್ಲಿ ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಮೈಸೂರು ನಿವಾಸಿ ಹಾಗೂ ಬಳಿಕ ಬಂಗ್ರಮಂಜೇಶ್ವರದಲ್ಲಿ ವಾಸಿಸತೊಡಗಿದ ಮುನಾವರ್ ಇಸ್ಮಾಯಿಲ್ ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗಾಗಿ ಸಲ್ಲಿಸಿದ ಅರ್ಜಿಯನ್ನು ಅಂದು ಪರಿಶೀಲನೆ ನಡೆಸಿದ್ದ ಉಪ ತಹಶೀಲ್ದಾರ್ ಎ. ದಾಮೋದರನ್ ತಿರಸ್ಕರಿಸಿದ್ದರು. ಅಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎಕೆಎಂ ಅಶ್ರಫ್, ಪಂಚಾಯತ್ ಸದಸ್ಯರಾಗಿದ್ದ ಅಬ್ದುಲ್ಲ ಕಜೆ, ಬಶೀರ್ ಕನಿಲರ ನೇತೃತ್ವದ ತಂಡವೊಂದು ಅಂದು ಪ್ರಶ್ನಿಸಿ ಕರ್ತವ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಪ್ರಕರಣ ಎಕೆಎಂ ಅಶ್ರಫ್ ಸೇರಿದಂತೆ ಇತರ ವಿರುದ್ಧ ಪ್ರಕರಣ ದಾಖಲಿ ಸಿಕೊಂಡಿದ್ದಾರೆ.