ಮತಯಾಚಿಸಿ ಬಂದ ಪಂ. ಸದಸ್ಯನ ಮುಖಕ್ಕೆ ಬಿಸಿ ಗಂಜಿ ನೀರು ಎರಚಿದ ಮನೆಯೊಡೆಯ

ತಿರುವನಂತಪುರ: ಮತಯಾಚಿಸಿ ಮನೆಗೆ ತೆರಳಿದ ಪಂಚಾಯತ್ ಸದಸ್ಯನ ಮುಖಕ್ಕೆ ಬಿಸಿ ಗಂಜಿ ನೀರು ಎರಚಿದ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಮುದಿಕ್ಕಲ್ ಪಂಚಾಯತ್ ಸದಸ್ಯ ಬಿಜು ಎಂಬಿವರನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಟಿಂಗಲ್‌ನ ಎಡರಂಗ ಅಭ್ಯರ್ಥಿ ವಿ. ಜೋಯಿಯವರ ಪ್ರಚಾರದ ಅಂಗವಾಗಿ ಅಲ್ಲಿನ ಮನೆ ಯೊಂದರಲ್ಲಿ ಬಿಜು ತೆರಳಿದ್ದರು. ಮತಯಾಚನೆ ನಡೆಸುತ್ತಿದ್ದಂತೆ ಮನೆಯೊಡೆಯ ಸಜಿ ಎಂಬಿವರು ಬಿಸಿ ಗಂಜಿನೀರನ್ನು ಬಿಜುವಿನ ಮುಖಕ್ಕೆ ಎರಚಿರುವುದಾಗಿ ದೂರಲಾಗಿದೆ. ಈ ಸಂಬಂಧ ಸಜಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED NEWS

You cannot copy contents of this page