ಮತ್ತೆ 27 ವಿಮಾನಗಳಿಗೆ ಬಾಂಬ್ ಬೆದರಿಕೆ
ನವದೆಹಲಿ: ದೇಶದಲ್ಲಿ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಘಟನೆ ಇನ್ನೂ ಮುಂದುವರಿದಿದೆ. ನಿನ್ನೆ ಮಾತ್ರವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿದಂತೆ ಒಟ್ಟು 27 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂಡಿಗೋ, ವಿಸ್ತಾರ, ಜೆಟ್ ಸಂಸ್ಥೆಯ 7 ವಿಮಾನ ಹಾಗೂ ಏರ್ ಇಂಡಿಯಾದ ಆರು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ. ಕಳೆದ 12 ದಿನಗಳಲ್ಲಿ 275ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ಸಾಮಾಜಿಕ ಜಾಲತಾಮದ ಮೂಲಕ ಬಂದಿದ್ದು, ಆ ಬಗ್ಗೆ ಕೇಂದ್ರ ಸರಕಾರ ತನಿಖೆಯನ್ನು ಆರಂಭಿಸಿದೆ.