ಮತ ಚಲಾಯಿಸಲು ಇತರ 12 ಅಂಗೀಕೃತ ಗುರುತು ಪತ್ರಗಳನ್ನೂ ಉಪಯೋಗಿಸಬಹುದು

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಫೋಟೋ ಒಳಗೊಂಡ ಮತದಾರ ಗುರುತು ಪತ್ರ (ಎಪಿಕ್)ನ್ನು ಅಧಿಕೃತ ದಾಖಲು ಪತ್ರವನ್ನಾಗಿ ಹಾಜರುಪಡಿಸಬೇಕಾಗಿದೆಯಾದರೂ ಆದರೆ ಅದು ಕೈವಶವಿಲ್ಲದೇ ಇರುವ ಮತದಾರರು ಫೋಟೋ ಲಗತ್ತಿಸಿರುವ ಇತರ ಅಂಗೀಕೃತ 12 ಗುರುತು ಪತ್ರಗಳನ್ನು ಮತಚಲಾವಣೆಗಾಗಿ ಉಪಯೋಗಿಸಬಹುದೆಂದು ರಾಜ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ.

ಇದರಂತೆ ಚುನಾವಣಾ ಆಯೋಗ ನೀಡಿರುವ ಮತದಾರ ಗುರುತು ಪತ್ರ ಕೈವಶವಿಲ್ಲದೇ ಇರುವವರು ಅದರ ಬದಲು ಆಧಾರ್ ಕಾರ್ಡ್, ಎಂ.ಎಲ್.ಆರ್.ಇ.ಜಿ.ಎ. ಉದ್ಯೋಗ ಕಾರ್ಡ್ (ರಾಷ್ಟ್ರೀಯ ಉದ್ಯೋಗ ಖಾತರಿ ಜೋಬ್ ಕಾರ್ಡ್), ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡುವ ಫೋಟೋ ಲಗತ್ತಿಸಿದ ಪಾಸ್ ಪುಸ್ತಕ, ಉದ್ಯೋಗ ಸಚಿವಾಲಯದ ಆರೋಗ್ಯ ಇನ್ಶುರೆನ್ಸ್ ಸ್ಮಾರ್ಟ್ ಕಾರ್ಡ್ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ರಾಷ್ಟ್ರೀಯ ಜನಸಂಖ್ಯಾ  ರಿಜಿಸ್ಟ್ರೇಷನ್‌ನ ಆಶ್ರಯದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ನೀಡುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಫೋಟೋ ಸಹಿತವಿರುವ ಪೆನ್ಶನ್ ದಾಖಲು ಪತ್ರ, ಕೇಂದ್ರ- ರಾಜ್ಯ ನೌಕರರು ಸಾರ್ವಜನಿಕ ಸಂಸ್ಥೆಗಳು, ಪಬ್ಲಿಕ್ ಲಿಮಿಟೆಡ್ ಕಂಪೆನಿಗಳ ಸಿಬ್ಬಂದಿಗಳು ಅವರು ತಮ್ಮ ಸಂಸ್ಥೆ ನೀಡುವ ಫೋಟೋ ಲಗತ್ತಿಸಿದ ಗುರುತು ಪತ್ರ, ಸಂಸದ್ ಸದಸ್ಯರು, ಶಾಸಕರು, ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರು ತಮ್ಮ ಅಧಿಕೃತ ಗುರುತು ಪತ್ರಗಳು, ವಿಕಲಚೇತನ ಗುರುತು ಕಾರ್ಡ್ (ಯುಡಿಐಡಿ ಕಾರ್ಡ್) ಇತ್ಯಾದಿ ಚುನಾವಣಾ ಆಯೋಗ ನಿರ್ದೇಶಿಸಿರುವ ಅಂಗೀಕೃತ ಗುರುತು ಚೀಟಿಗಳನ್ನು ಮತದಾನಕ್ಕಾಗಿ ವಿನಿಯೋಗಿಸಬಹುದೆಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page