ಮದ್ಯದಂಗಡಿಯಲ್ಲಿ ಕಳವು ಯತ್ನ : ಓರ್ವ ಸೆರೆ
ಕಾಸರಗೋಡು: ನಗರದ ಐ.ಸಿ. ಭಂಡಾರಿ ರಸ್ತೆ ಬಳಿ ಕಾರ್ಯ ವೆಸಗುತ್ತಿರುವ ರಾಜ್ಯ ಬಿವರೇಜ್ ಕಾರ್ಪರೇಷನ್ನ ಮದ್ಯದಂಗಡಿಯಲ್ಲಿ ಕಳವಿಗೆ ಯತ್ನಿಸಿದ ಪ್ರಕರಣದ ಆರೋಪಿಗಳಲ್ಲೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ತಳಂಗರೆ ನಿವಾಸಿ ಉಮೈರ್(೨೧) ಎಂಬಾತ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಿದ್ದು, ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಮಾರ್ಚ್ ೬ರಂದು ರಾತ್ರಿ ಮದ್ಯದಂಗಡಿಯಲ್ಲಿ ಕಳವಿಗೆ ಯತ್ನ ನಡೆದಿತ್ತು. ಮುಖಕ್ಕೆ ಬಟ್ಟೆ ಮುಚ್ಚಿ ಬಂದ ಕಳ್ಳರು ಮದ್ಯದಂಗಡಿಯ ಬೀಗ ಮುರಿಯುತ್ತಿರುವ ದೃಶ್ಯ ಆ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.