ಮದ್ರಸ ವಿದ್ಯಾರ್ಥಿನಿಯನ್ನು ಬೈಕ್‌ಗೆ ಹತ್ತಿಸಿ ಕಿರುಕುಳ: ಆರೋಪಿಗಾಗಿ ಶೋಧ

ಉಪ್ಪಳ: ಮದ್ರಸದಿಂದ ಮನೆಗೆ ಹೋಗುತ್ತಿದ್ದ ೧೦ರ ಹರೆಯದ ಬಾಲಕಿಯನ್ನು ಬೈಕ್‌ನಲ್ಲಿ ಹತ್ತಿಸಿ ಕರೆದೊಯ್ದು ಕಿರುಕುಳ ನೀಡಿದ ಬಗ್ಗೆ ದೂರುಂಟಾಗಿದೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ಬಾಲಕಿ ಮದ್ರಸದಿಂದ ಮನೆಗೆ ಹೋಗುತ್ತಿದ್ದಳು. ಈ ಮಧ್ಯೆ ತಲುಪಿದ ವ್ಯಕ್ತಿ ಬಾಲಕಿಯ ಸಮೀಪ ಬೈಕ್ ನಿಲ್ಲಿಸಿ ಮನೆಗೆ ತಲುಪಿಸುವುದಾಗಿ ತಿಳಿಸಿ ಆಕೆಯನ್ನು ಬೈಕ್‌ಗೆ ಹತ್ತಿಸಿದ್ದಾನೆಂದು ಹೇಳಲಾಗುತ್ತಿದೆ. ಪ್ರಯಾಣ ಮಧ್ಯೆ ಬಾಲಕಿಗೆ ಆತ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮನೆಗೆ ತಲುಪಿದ ಬಾಲಕಿ ಘಟನೆ ಬಗ್ಗೆ ಮನೆಯವರಲ್ಲಿ ತಿಳಿಸಿದ್ದಾಳೆ. ಕಿರುಕುಳ ನೀಡಿದ ವ್ಯಕ್ತಿಯನ್ನು ಕಂಡರೆ ಪತ್ತೆಹಚ್ಚಲು ಸಾಧ್ಯವೆಂದು ಬಾಲಕಿ ತಿಳಿಸಿದ್ದಾಳೆ.  ಇದರಿಂದ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

You cannot copy contents of this page