ಮಧೂರು ಕ್ಷೇತ್ರ ಮಹಾದ್ವಾರ 26ರಂದು ಸುರೇಶ್ ಗೋಪಿ ಲೋಕಾರ್ಪಣೆ

ಮಧೂರು: ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಸಜ್ಜು ಗೊಂಡಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಮಧೂರು ಶ್ರೀ ಮದನಂತೆಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಕಳೆಯನ್ನು ಇಮ್ಮಡಿಗೊಳಿಸಿದ ಮಹಾ  ದ್ವಾರ  ರಾಜಗೋಪುರ ಮತ್ತು ರಾಜಾಂಗಣದ ಉದ್ಘಾಟನೆ ಮಾರ್ಚ್ 26ರಂದು ಪೂರ್ವಾಹ್ನ 10 ಗಂಟೆಗೆ ಜರಗಲಿದೆ. ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ಉದಾರ ದಾನಿ ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ನಿರ್ಮಿಸಿ ಕೊಟ್ಟ ದ್ರಾವಿಡ ಶೈಲಿಯ ಮಹಾದ್ವಾರವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಲೋಕಾರ್ಪಣೆಗೊಳಿಸುವರು. ಬ್ರಹ್ಮ ಕಲಶೋತ್ಸವ, ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ. ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸುವರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣÉಲ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಆಶೀರ್ವಚನ ನೀಡುವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಾಡೋಜ ಜಿ. ಶಂಕರ್ ಉಡುಪಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ.ಕೆ ಶೆಟ್ಟಿ ಕುತ್ತಿಕ್ಕಾರ್ ಕನ್ಯಾನ, ರಘುರಾಮ ಶೆಟ್ಟಿ, ಬಿ.ಕೆ. ಮಧೂರು ಮುಂಬೈ, ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ಮುಖ್ಯ ಅತಿಥಿಗಳಾಗಿ, ದಯಾಸಾಗರ ಚೌಟ ಮುಂಬೈ, ಡಾ. ಮಮತಾ ಶೆಟ್ಟಿ, ಪುರುಷೋತ್ತಮ ಭಂಡಾರಿ ಭಾಗವಹಿಸುವರು.

You cannot copy contents of this page