ಮಧೂರು ಕ್ಷೇತ್ರ ಸೇವಾ ಕೇಂದ್ರ, ವಿಶ್ರಾಂತಿ ಕೊಠಡಿ ಕಟ್ಟಡಕ್ಕೆ ಶಂಕುಸ್ಥಾಪನೆ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸುವ ಸೇವಾ ಕೇಂದ್ರ ಹಾಗೂ ವಿಶ್ರಾಂತಿ ಕೊಠಡಿ ಕಟ್ಟಡದ ಶಂಕುಸ್ಥಾಪನೆಯನ್ನು ಮಲಬಾರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎಂ.ಆರ್. ಮುರಳಿ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸಿದರು. ಡಾ. ಶಿವಪ್ರಸಾದ್ ತಂತ್ರಿ ದೇರೇಬೈಲು ಅನುಗ್ರಹ ಭಾಷಣ ಮಾಡಿದರು. ಕ್ಷೇತ್ರದ ಪವಿತ್ರ ಪಾಣಿಗಳಾದ ರತನ್ ಕುಮಾರ್ ಕಾಮಡ, ಮಲಬಾರ್ ದೇವಸ್ವಂ ಮಂಡಳಿ ಅಸಿಸ್ಟೆಂಟ್ ಕಮಿಷನರ್ ಪ್ರದೀಪ್ ಕುಮಾರ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರದ ನಿರ್ವಹಣಾಧಿಕಾರಿ ರಾಜೇಶ್ ಟಿ, ಕೊಡುಗೈ ದಾನಿ ಕೆ.ಕೆ. ಶೆಟ್ಟಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್ ಉಪಸ್ಥಿತರಿದ್ದರು. ಗಿರೀಶ್ ಸಂದ್ಯಾ ನಿರೂಪಿಸಿ, ವಂದಿಸಿದರು.