ಮಧೂರು ದೇಗುಲದ ಸೇವಾ ಕೌಂಟರ್‌ಗೆ ಭೂಮಿ ಪೂಜೆ

ಕಾಸರಗೋಡು:  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗ ನೂತನವಾಗಿ ನಿರ್ಮಿಸಲಿರುವ ಸೇವಾ ಕೌಂಟರ್ ಹಾಗೂ ಶೌಚಾಲಯ ಕಟ್ಟಡ ಸಂಕೀರ್ಣಕ್ಕೆ ಭೂಮಿ ಪೂಜೆ ನಡೆಯಿತು. ನಟರಾಜ ಕಲ್ಲೂರಾಯ ಪೌರೋಹಿತ್ಯ ವಹಿಸಿದರು. ಈ ಸಂದರ್ಭದಲ್ಲಿ ನವೀಕರಣ ಸಮಿತಿಯ ನಾರಾಯಣಯ್ಯ ಮಾಸ್ತರ್, ಮುರಳಿ ಗಟ್ಟಿ ಪರಕ್ಕಿಲ, ರವೀಂದ್ರ ರೈ, ದೇಗುಲದ ಸಿಬ್ಬಂದಿ ಕೆ. ಶಾಮ ಮಧ್ಯಸ್ಥ, ಇಂಜಿನಿಯರ್ ಅನಿಲ್ ಕುಮಾರ್ ಕಣ್ಣೂರ್ ಸಹಕರಿಸಿದರು.

Leave a Reply

Your email address will not be published. Required fields are marked *

You cannot copy content of this page