ಮಧೂರು: ಮಹಾಮೂಡಪ್ಪ ಸೇವೆಗೆ ಅಕ್ಕಿ ಮುಹೂರ್ತ
ಮಧೂರು: ಶ್ರೀ ಮದನಂತೇ ಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಹಾಮೂಡಪ್ಪಸೇವೆಯಂಗವಾಗಿ ಇಂದು ಬೆಳಿಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ಬಳಿಕ ಮಹಾ ಮೂಡಪ್ಪ ಸೇವೆಯ ಅಕ್ಕಿ ಮುಹೂರ್ತ ನಡೆಯಿತು. ಸಂಜೆ 6 ಗಂಟೆಗೆ ನಡುದೀಪೋತ್ಸವ, ಸುತ್ತು ಸೇವೆಗಳು, ಶ್ರೀ ಮಹಾಗಣ ಪತಿ ಮಂತ್ರಾನುಷ್ಠಾನ ನಡೆಯಲಿ ರುವುದು. ನಾಳೆ ಬೆಳಿಗ್ಗೆ 5 ಗಂಟೆಗೆ ದೀಪದಬಲಿ, ದರ್ಶನಬಲಿ, ರಾಜಾಂ ಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾ ಗಣಪತಿಯಾಗ, ಕಲಶಾಭಿಷೇಕ, 9ಕ್ಕೆ ಮಹಾಮೂಡಪ್ಪ ಸೇವೆಯ ಅರಿ ಕೊಟ್ಟಿಗೆ ಮುಹೂರ್ತ ನಡೆಯಲಿದೆ. ಅನಂತರ ಮಧ್ಯಾಹ್ನ ಅಪ್ಪ ಮಾಡಲು ಪ್ರಾರಂಭಿಸಲಾಗು ವುದು. ಸಂಜೆ 5 ಗಂಟೆಗೆ ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ರಾತ್ರಿ 8ಕ್ಕೆ ಶ್ರೀ ದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, 10ಕ್ಕೆ ಶ್ರೀ ಭೂತಬಲಿ, ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆಯಾ ಗಲಿದೆ. ಬಳಿಕ ಶಯ್ಯಾಕಲ್ಪನೆ, ಕವಾಟಬಂಧನ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮಗ ಳಂಗವಾಗಿ ಇಂದು ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಬಳಿಕ ಧಾರ್ಮಿಕ ಸಭೆ ನಡೆಯಿತು. ಮಧ್ಯಾಹ್ನ 12.30 ರಿಂದ ವಿದುಷಿ ರೂಪಶ್ರೀ ಕೆ.ಎಸ್ ಬೆಂಗಳೂರು ಇವರಿಂದ ನೃತ್ಯವೈವಿಧ್ಯ, 1.30ಕ್ಕೆ ಸ್ಮಿತಾ ನಿತ್ಯಾನಂದ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಪರಾಹ್ನ 3 ಗಂಟೆಗೆ ಶಿವನಾಟ್ಯಾಂಜಲಿ ನೃತ್ಯ ವಿದ್ಯಾಲಯ ಕಾಞಂಗಾಡ್ ಇವರಿಂದ ಭರತ ನಾಟ್ಯ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾ ಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಈಶವಿಠಲದಾಸ ಸ್ವಾಮೀಜಿ ಯವರು ಆಶೀರ್ವಚನ ನೀಡು ವರು. ಮೈಸೂರು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಶ್ರೀ ಕಮಲಾದೇವಿಪ್ರಸಾದ ಅಸ್ರಣ್ಣ, ಆರ್ಎಸ್ಎಸ್ ಉತ್ತರಕೇರಳ ಸಂಘ ಚಾಲಕ್ ಕೆ.ಕೆ. ಬಲರಾಮ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 7.30ಕ್ಕೆ ವೈಷ್ಣವಿ ಆನಂದ್ ಸಿಂಗಾಪುರ ಅವರಿಂದ ಸಂಗೀತ ಕಛೇರಿ, ವಿದುಷಿ ಡಾ. ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾಲಯ ಕುಂಬಳೆ ಇವರ ಶಿಷ್ಯರಿಂದ ಭರತನಾಟ್ಯ ನಡೆಯಲಿದೆ.
ನಾಳೆ ಬೆಳಿಗ್ಗೆ 8ಕ್ಕೆ ಸೌಪರ್ಣಿಕಾ ಅನ್ವಿತ್ ಮನ್ನಿಪ್ಪಾಡಿ ಅವರಿಂದ , 9ಕ್ಕೆ ನಂದಿನಿ ವಿನಾಯಕ್ ಪುತ್ತೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. 10ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಕೃಷ್ಣಮೋಹನ ವರ್ಮ ಮಾಯಿಪ್ಪಾಡಿ ಅರಮನೆ ಅವರು ಉಪಸ್ಥಿತರಿರುವರು. ಸಂಜೆ 4ಕ್ಕೆ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯನ್ ಮೊದಲಾದವರು ಉಪಸ್ಥಿತರಿರುವರು. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಳೆ ನಡೆಯಲಿರುವುದು.