ಮನೆಗೆ ಅಕ್ರಮವಾಗಿ ನುಗ್ಗಿ ಇಬ್ಬರಿಗೆ ಹಲ್ಲೆ : 5 ಮಂದಿ ವಿರುದ್ಧ ಕೇಸು
ಬದಿಯಡ್ಕ: ಬೇಳ ನಿವಾಸಿ ಸುಧಾದೇವಿ (47) ಎಂಬವರ ಮನೆಗೆ ಜ. 21ರಂದು ರಾತ್ರಿ ಹಾಕಿಸ್ಟಿಕ್ ಇತ್ಯಾದಿ ಮಾರಕಾ ಯುಧ ಗಳೊಂದಿಗೆ ಅಕ್ರಮವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು ಹೊಡೆದು ಹಾನಿಗೊಳಿಸಿ ಅಶ್ಲೀಲ ಭಾಷೆಯಲ್ಲಿ ಬೈದು ಅವರ ಸಹೋದರಿಯ ಮಗ ಚೇತನ್ ರಾಜ್‌ನನ್ನು ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಐದು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಮಂಜು, ಚಂದ್ರು, ಆದಿರಾ ಹಾಗೂ ಇತರ ಇಬ್ಬರು ಸೇರಿ ಐದು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.