ಮನೆಗೆ ನುಗ್ಗಿ ಯುವತಿ, ತಂದೆಗೆ ಇರಿತ: ಯುವಕನ ವಿರುದ್ದ ಕೊಲೆಯತ್ನ ಪ್ರಕರಣ
ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಯುವತಿ ಹಾಗೂ ಆಕೆಯ ತಂದೆಯನ್ನು ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪದಂತೆ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಹತ್ಯೆಯತ್ನ ಕೇಸು ದಾಖಲಿಸಿಕೊಂ ಡಿದ್ದಾರೆ. ಬೇಳ ನಿವಾಸಿ ರೋಯ್ಸನ್ ಎಂಬಾತನ ವಿರುದ್ಧ ಕೇಸು ದಾಖಲಿಸ ಲಾಗಿದೆ. ಬೇಳ ಪೆರಿಯಡ್ಕದ ರೈಮಂಡ್ ಡಿ’ಸೋಜಾ (65), ಪುತ್ರಿ ರೇಂಜಲ್ ರನಿಟ್ ಡಿ’ಸೋಜಾ (24) ಎಂಬಿವರಿಗೆ ಇರಿದು ಗಾಯಗೊಳಿಸಲಾಗಿದೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಳೆದ ಶನಿವಾರ ರಾತ್ರಿ 7.30ರ ವೇಳೆ ಆರೋಪಿ ರೋಯ್ಸನ್ ಚಾಕು ಸಹಿತ ಮನೆಗೆ ಅತಿಕ್ರಮಿಸಿ ನುಗ್ಗಿ ರೈಮಂ ಡ್ ಡಿ’ಸೋಜಾ ಹಾಗೂ ರೇಂಜಲ್ ರನಿಟ್ ಡಿ’ಸೋಜಾರಿಗೆ ಇರಿದು ಗಾಯಗೊಳಿಸಿ ನೆಲಕ್ಕೆ ದೂಡಿ ಹಾಕಿ ದ್ದಾನೆಂದು ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.