ಮರದಿಂದ ವಿದ್ಯುತ್ ತಂತಿ ಮೇಲೆ ಬಿದ್ದು ಪ್ರಾಣ ಕಳೆದುಕೊಂಡ ಹೆಬ್ಬಾವು
ಕಾಸರಗೋಡು: ಹೆಬ್ಬಾವುವೊಂದು ಮರದಿಂದ ಎಚ್‌ಟಿ ವಿದ್ಯುತ್ ಲೈನ್ ಮೇಲೆ ಬಿದ್ದು ಸಾವಿಗೀಡಾದ ಘಟನೆ ಇಂದು ಬೆಳಿಗ್ಗೆ ಕಾಸರಗೋಡು ನಗರದಲ್ಲಿ ನಡೆದಿದೆ. ನಗರದ ಹಳೆ ಪ್ರೆಸ್ ಕ್ಲಬ್ ಸಮೀಪ ಅಮೈ ಜಂಕ್ಷನ್‌ನಲ್ಲಿರುವ ಮರದ ಮೇಲೆ ಹೆಬ್ಬಾವು ಹತ್ತಿತ್ತು. ಇಂದು ಬೆಳಿಗ್ಗೆ 7.20 ರ ವೇಳೆ ಹೆಬ್ಬಾವು ಮರದಿಂದ ವಿದ್ಯುತ್ ತಂತಿಗಳ ಮೇಲೆ ಬಿದ್ದು ಶಾಕ್ ತಗಲಿ ಚಡಪಟಿಸುತ್ತಿ ದ್ದಾಗಲೇ ಘಟನೆ ಸ್ಥಳೀಯರ ಗಮನಕ್ಕೆ ಬಂದಿದೆ. ವಿಷಯ ತಿಳಿದು ವಿದ್ಯುತ್ ಕಚೇರಿಯಿಂದ ಸಿಬ್ಬಂದಿಗಳು ತಲುಪಿ ಹಾವು ಹಿಡಿಯುವ ತರಬೇತಿ ಹೊಂದಿದ ಅಡ್ಡತ್ತಬೈಲಿನ ಅಮೀನ್ ಎಂಬವರ ಸಹಾಯದಿಂದ ಹಾವನ್ನು ಮರದಿಂದ ಕೆಳಕ್ಕಿಳಿಸಲಾಯಿತು. ಬಳಿಕ ಅದನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.