ಮರದ ಮಿಲ್ಲಿನಿಂದ ಬೆಂಕಿ ಆಕಸ್ಮಿಕ: ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ
ಮಂಜೇಶ್ವರ: ಕಳಿಯೂರು ಮರದ ಮಿಲ್‌ನಲ್ಲಿ ಸಂಭವಿಸಿರುವ ಬೆಂಕಿ ಅನಾಹುತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ. ಯಾವುದೇ ಮುಂಜಾಗ್ರತೆ ಇಲ್ಲದೆ, ಜನನಿಬಿಡ ಸ್ಥಳಗಳಲ್ಲಿ, ಶಾಲೆ ಪಕ್ಕದಲ್ಲಿ, ಕಾನೂನು ಗಾಳಿಗೆ ತೂರಿ ಕಾರ್ಖಾನೆಗಳಿಗೆ ಪಂಚಾ ಯತ್ ಅನುಮತಿ ನೀಡಿರುವುದಾಗಿ ಬಿಜೆಪಿ ಆರೋಪಿಸಿದೆ. ಈ ಮಿಲ್‌ನ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಗಬ್ಬುವಾಸನೆ ತಾಳಲಾಗದೆ ಸ್ಥಳೀಯರು ಸೂಚನೆ ನೀಡಿ ದರೂ ಮೀಂಜ ಪಂ. ಆರೋಗ್ಯ ಇಲಾಖೆ ಮೌನ ವಹಿಸಿತ್ತೆಂದು ಬಿಜೆಪಿ ದೂರಿದೆ. ಅವಘಡ ಹಿನ್ನೆಲೆಯಲ್ಲಿ ಮಂಜೇಶ್ವರ ಮಂಡಲ ವ್ಯಾಪ್ತಿಯ ಎಲ್ಲಾ ಮರದ ಮಿಲ್‌ಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಮೀರಿ ಕಾರ್ಯನಿರ್ವ ಹಿಸುವ ಮಿಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಲ್ಲದೆ ಜನತೆಗೆ ತೊಂದರೆ ಆಗುವ ರೀತಿಯಲ್ಲಿ ರಸ್ತೆ ಬದಿಗಳಲ್ಲಿ ಮರದ ದಿಮ್ಮಿಗಳನ್ನು ಸಂಗ್ರಹಿಸಿಡುವುದನ್ನು ತಡೆಯಬೇಕೆಂದು ಬಿಜೆಪಿ ಆಗ್ರಹಿಸಿದೆ.