ಮಲಯಾಳ ಸಿನಿಮಾ ನಟಿ ಕನಕಲತ ನಿಧನ
ತಿರುವನಂತಪುರ: ಮಲಯಾಳ ಸಿನಿಮಾ ನಟಿ ಕನಕಲತ (೬೩) ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನಹೊಂದಿದ್ದಾರೆ.
ಈಗ ತಿರುವನಂತಪುರ ಪೊಟ್ಟಯಿಲ್ನಲ್ಲಿ ವಾಸಿಸುತ್ತಿರುವ ಪುಳಿಯಾರಕಡ ನಿವಾಸಿಯಾಗಿರುವ ಕನಕಲತ ಮರೆವು ಹಾಗೂ ಇತರ ರೋಗದಿಂದ ಬಳಲುತ್ತಿದ್ದರು. ೯ನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆಯಲ್ಲೇ ಕನಕಲತ ನಾಟಕಗಳಲ್ಲಿ ಅಭಿನಯಿಸಲು ತೊಡಗಿದ್ದರು. ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅವರು ೩೫೦ಕ್ಕೂ ಹೆಚ್ಚು ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಾಗಿ ಅಭಿನಯಿಸಿ ಮಿಂಚಿದ್ದಾರೆ. ಕೊಲ್ಲಂ ಜಿಲ್ಲೆಯ ಒಚ್ಚಿರದ ಪರಮೇಶ್ವರ ಪಿಳ್ಳೆ-ಚೆನ್ನಮ್ಮ ದಂಪತಿಯ ಪುತ್ರಿಯಾಗಿ ೧೯೬೦ ಅಗೋಸ್ತ್ ೨೪ರಂದು ಜನಿಸಿದ ಕನಕಲತ, ೧೯೮೦ರಲ್ಲಿ ‘ಉಣರ್ತು ಪಾಟ್’ ಎಂಬ ಸಿನಿಮಾದ ಮೂಲಕ ಮೊತ್ತ ಮೊದಲಾಗಿ ಸಿನಿಮಾ ಲೋಕಕ್ಕೆ ಪಾದಾರ್ಪಣೆಗೈದಿದ್ದರು. ಆ ಬಳಿಕ ೩೫೦ರಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಪೂಕಾಲಂ’ ಎಂಬುವುದು ಅವರು ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು. ೨೦೨೨ ಅಗೋಸ್ತ್ನಿಂದ ಅವರಿಗೆ ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಬಳಿಕ ಅವರು ನಟನಾ ಜೀವನವನ್ನು ಅಲ್ಲಿಗೇ ಕೊನೆಗೊಳಿಸಿದ್ದರು.