ಕಲ್ಲಿಕೋಟೆ: ಮಲಾಪರಂಬ್ ಸೆಕ್ಸ್‌ರ‍್ಯಾಕೆಟ್ ಪ್ರಕರಣದಲ್ಲಿ ಆರೋಪಿ ಗಳಾದ ಇಬ್ಬರು ಪೊಲೀಸರನ್ನು ಕಸ್ಟಡಿಗೆ ತೆಗೆಯಲಾಗಿದೆ. ಚಾಲಕರಾದ ಶೈಜಿತ್, ಸನಿತ್‌ರನ್ನು ಕಸ್ಟಡಿಗೆ ತೆಗೆಯಲಾಗಿದೆ. ತಾಮರಶ್ಶೇರಿಯಲ್ಲಿ ಇವರನ್ನು ನಡಕ್ಕಾವ್ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿ ಸೇವೆಯಿಂದ ಇವರನ್ನು ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇವರು ತಲೆಮರೆಸಿಕೊಂಡಿದ್ದರು. ಇವರಿಗೆ ಸೆಕ್ಸ್‌ರ‍್ಯಾಕೆಟ್‌ನೊಂದಿಗೆ ನೇರ ಸಂಪರ್ಕವಿರುವುದಾಗಿಯೂ, ಆರ್ಥಿಕ ವ್ಯವಹಾರಗಳನ್ನು ನಡೆಸಿರುವುದಾಗಿಯೂ ಪತ್ತೆಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ತನಿಖಾವಿದೇಯವಾಗಿ ಅಮಾನತುಗೊಳಿಸಲಾಗಿದ್ದು, ಬಳಿಕ ಇವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದೇ ವೇಳೆ ಸೆರೆಯಾದ ವಯನಾಡ್ ನಿವಾಸಿ ಬಿಂದು ಎಂಬಾಕೆ ಈ ಮೊದಲೂ ಕೂಡಾ ಸೆಕ್ಸ್ ರ‍್ಯಾಕೆಟ್‌ನಲ್ಲಿ ಆರೋಪಿಯಾಗಿದ್ದಳು ೨೦೨೨ರಲ್ಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಪೊಲೀಸರು ಈಕೆಯನ್ನು ಸೆರೆ ಹಿಡಿದಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಬಾಡಿಗೆ ಮನೆ ಕೇಂದ್ರೀಕರಿಸಿ ವೇಶ್ಯಾವಾ ಟಿಕೆ ದಂಧೆ ನಡೆಸಿದ ಹಿನ್ನೆಲೆಯಲ್ಲಿ ಅಂದು ಈಕೆಯನ್ನು ಸೆರೆ ಹಿಡಿಯಲಾಗಿತ್ತು.