ಮವ್ವಾರಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ  ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಶ್ರೀ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾ ಭಿಷೇಕ ಹಾಗೂ ಪರಿವಾರ ದೇವರುಗಳಿಗೆ ಕಲಶಾಭಿಷೇಕ ಇಂದು ಬೆಳಿಗ್ಗೆ ನಡೆಯಿತು. ಇಂದು ಅಪರಾಹ್ನ ಗಂಟೆ ೨ರಿಂದ ಭಜನೆ, ೩.೩೦ಕ್ಕೆ ಮಾಣಿಲ ಶ್ರೀ  ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾ ಗುವುದು. ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು. ಉದ್ಯಮಿ ಶಂಕರನಾ ರಾಯಣ ಮಯ್ಯ ಬದಿ ಯಡ್ಕ, ವಸಂತಿ ಟೀಚರ್ ಅಗಲ್ಪಾಡಿ ಮುಖ್ಯ ಅತಿಥಿಗಳಾ ಗಿರುವರು. ಹಲವರು ಗಣ್ಯರು ಉಪಸ್ಥಿತರಿ ರುವರು. ರಾತ್ರಿ ೭.೩೦ಕ್ಕೆ ದೀಪಾರಾಧನೆ, ಪೂಜೆ, ಅನ್ನ ಸಂತರ್ಪಣೆ, ೭.೪೫ಕ್ಕೆ ಭಂಡಾರ ಆಗಮನ, ದೈವಗಳ ತೊಡಂ ಙಲ್, ಪೊಟ್ಟನ್ ದೈವದ ಕೋಲ, ನಾಳೆ ಬೆಳಿಗ್ಗೆ ಧೂಮಾವತಿ ಹಾಗೂ ರಕ್ತೇಶ್ವರಿ ದೈವಗಳ ಕೋಲ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

RELATED NEWS

You cannot copy contents of this page