ಮವ್ವಾರು ಕ್ಷೇತ್ರ ಬ್ರಹ್ಮಕಲಶ: ಗರುಡ ದರ್ಶನದಿಂದ ಪುಳಕಿತರಾದ ಭಕ್ತ ಸಮೂಹ

ಮವ್ವಾರು: ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಲ್ಲಿ ನಿನ್ನೆ ನಡೆದ ಬ್ರಹ್ಮಕಲಶೋತ್ಸವ ವೇಳೆ ಗರುಡ ಪ್ರತ್ಯಕ್ಷಗೊಂಡಿದ್ದು, ಭಕ್ತರಿಗೆ ಕ್ಷೇತ್ರದ ಮಹಿಮೆಯನ್ನು ಸಾರಿ ಹೇಳಿದೆ. ಬ್ರಹ್ಮಕಲಶೋತ್ಸವ ಅಭಿಷೇ ಕಗಳು ಎಲ್ಲಾ ಕಳೆದು ಗರ್ಭಗುಡಿಗೆ ಮುಗುಳಿ ಇಡುವ ವೇಳೆ ದಿಢೀರಾಗಿ ಕಾಣಿಸಿಕೊಂಡ ಗರುಡ ಕ್ಷೇತ್ರಕ್ಕೆ ಮೂರು ಸುತ್ತು ಬಂದು ಅಪ್ರತ್ಯಕ್ಷವಾ ಗಿದೆಯೆಂದು  ಇಲ್ಲಿ ಸೇರಿದ ಭಕ್ತರು ತಿಳಿಸುತ್ತಾರೆ. ಇದರ ಬಗ್ಗೆ ಕ್ಷೇತ್ರದ ತಂತ್ರಿ ಕೂಡಾ ಸಂದೇಶ ನೀಡಿ ಕ್ಷೇತ್ರದಲ್ಲಿ ನಡೆಸಿದ ಬ್ರಹ್ಮಕಲಶಾಧಿ ಕಾರ್ಯಗಳು ದೇವರಿಗೆ ವೆಚ್ಚಿಗೆಯಾಗಿದೆಯೆಂಬುದಕ್ಕೆ ಗರುಡ ದರ್ಶನ ಸಾಕ್ಷಿ ಎಂದ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ನಡೆದುಬರುತ್ತಿದ್ದ ಬ್ರಹ್ಮಕಲಶ ಮಹೋತ್ಸವ ಸಂಪೂರ್ಣ ಯಶಸ್ವಿಯಾಗಿ ನಡೆದಿರುವುದು ಇಲ್ಲಿನ ಭಕ್ತರಿಗೆ ಸಂತಸ ತಂದಿದ್ದು, ದೇವರ ಸಂಪೂರ್ಣ ಅನುಗ್ರಹ ಲಭಿಸಿದೆಯೆಂದು ಧನ್ಯತಾಭಾವ ಹೊಂದಿದ್ದಾರೆ. ಬ್ರಹ್ಮಕಲಶ ನಡೆಸುವಾಗ ಬಿಸಿಲಿನ ಮಧ್ಯೆ ನಾಲ್ಕು ಹನಿ ಮಳೆ ಬಿದ್ದು, ಛಾವಣಿಯಿಂದ ನೀರು ಹರಿದಿದೆ ಎಂದೂ ಸ್ಥಳೀಯರು ತಿಳಿಸುತ್ತಾರೆ.

RELATED NEWS

You cannot copy contents of this page