ಮಹಿಳೆ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ವರ್ಕಾಡಿ ಕೆದುಂಬಾಡಿ ಬಾವಲಿಗುಳಿಯ ಅಸ್ತಾಬ್ ಎಂಬವರ ಪತ್ನಿ ಅಪ್ಸಾಬಿ (58) ಮನೆ ಬಳಿಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಮುಂಜಾನೆ 5.30ಕ್ಕೆ ಇವರು ಮನೆಯಿಂದ ನಾಪತ್ತೆ ಯಾಗಿದ್ದರು. ಇದರಿಂದ ಅವರಿಗಾಗಿ ಮನೆಯವರು ಹುಡುಕಾಟ ನಡೆಸುತ್ತಿ ದ್ದಾಗ ಅಪ್ಸಾಬಿ ಬಾವಿಯಲ್ಲಿ ಬಿದ್ದಿರು ವುದು ಕಂಡುಬಂದಿದೆ. ಅಗ್ನಿಶಾಮಕದಳ ತಲುಪಿ ಅವರನ್ನು ಮೇಲಕ್ಕೆತ್ತಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಮೃತರು ಮಕ್ಕಳಾದ ವಾಸಿಹ್, ವಾಹಿದ್, ಮುಸ್ತಫ, ಶಂಸೀರ್,ಅಸ್ಲಾಂ, ರುಕ್ಸಾನ, ರುಫೈದ, ರುಬೀನ, ಅಫ್ರೀದಾ, ಸಹೋದರ-ಸಹೋದರಿಯರಾದ ಅಬ್ದುಲ್ ನಾಸರ್ ತಂಙಳ್ (ಕಲ್ಲಿಕೋಟೆ), ಪೂಕುಟ್ಟಿ ತಂಙಳ್, ಸುಹ್ರಾಬಿ (ಚೆರ್ಕಳ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page