ಮಾಜಿ ಪತ್ನಿಯೊಂದಿಗೆ ಸ್ನೇಹವಿದೆಯೆಂದು ಆರೋಪಿಸಿ ಆಟೋ ಚಾಲಕನನ್ನು ಇರಿದು ಕೊಲೆಗೆ ಯತ್ನ: ಕೊಲೆ ಪ್ರಕರಣದ ಆರೋಪಿ, ಸಹಚರ ಬಂಧನ
ಕುಂಬಳೆ: ಮಾಜಿ ಪತ್ನಿಯೊಂ ದಿಗೆ ಸ್ನೇಹವಿದೆಯೆಂದು ಆರೋಪಿಸಿ ಮೊಗ್ರಾಲ್‌ನಲ್ಲಿ ಆಟೋ ಚಾಲಕನನ್ನು ಇರಿದು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಕೊಲೆ ಪ್ರಕರಣದ ಆರೋಪಿ ಹಾಗೂ ಸಹ ಚರನನ್ನು ಬಂಧಿಸಿದ್ದಾರೆ. ಆರೋ ಪಿಗಳು ಸಂಚರಿಸಿದ ವ್ಯಾನ್ ಕಸ್ಟಡಿಗೆ ತೆಗೆಯಲಾಗಿದೆ.
ಕಾಸರಗೋಡು ಚೌಕಿ ಕಲ್ಲಂಗೈಯ ಹಬೀಬ್ ಯಾನೆ ಅಭಿಲಾಷ್ (30), ದೇರಳಕಟ್ಟೆ ಎ.ಬಿ. ಮಂಜಿಲ್‌ನ ಅಹ ಮ್ಮದ್ ಕಬೀರ್ (24) ಎಂಬಿವರನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐಗಳಾ ದ ವಿ.ಕೆ. ವಿಜಯನ್, ಗಣೇಶ್, ಎ.ಎಸ್.ಐ ಪ್ರಸಾದ್ ಎಂಬಿವರ ನೇತೃತ್ವದ ತಂಡ ಬಂಧಿಸಿದೆ.
ಸಮೂಸ ರಶೀದ್ ಕೊಲೆ ಪ್ರಕರಣ, ಗಾಂಜಾ ಸಾಗಾಟ, ಕೊಲೆಯತ್ನ, ಮಹಿಳೆಯರಿಗೆ ಹಲ್ಲೆ, ಅಪಹರಣ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾದ ಹಬೀಬ್ ಯಾನೆ ಅಭಿಲಾಷ್‌ನನ್ನು ಕಾಪಾ ಹೇರಿ ಜೈಲಿಗಟ್ಟಲಾಗಿತ್ತು. ಈತ ಇತ್ತೀಚೆಗೆ ಬಿಡುಗಡೆಗೊಂಡಿದ್ದನು.
ಪೆರುವಾಡ್ ಮಳಿಂಗರ ಹೌಸ್‌ನ ಆಟೋ ಚಾಲಕ ಅಬೂಬಕರ್ ಸಿದ್ದಿಕ್ (35)ರನ್ನು ಕೊಲೆಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ 3 ಗಂಟೆ ವೇಳೆ ಮೊಗ್ರಾಲ್ ಶಾಲೆ ಸಮೀಪಕ್ಕೆ ಓಮ್ನಿ ವ್ಯಾನ್‌ನಲ್ಲಿ ತಲುಪಿದ ಆರೋಪಿಗಳು ಇರಿದು ಗಾಯಗೊಳಿಸಿರುವು ದಾಗಿಯೂ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಹಬೀಬ್‌ನ ಮಾಜಿ ಪತ್ನಿಯೊಂದಿಗೆ ಸ್ನೇಹವಿದೆಯೆಂದು ಆರೋಪಿಸಿ ಆಕ್ರಮಿಸಿರುವುದಾಗಿ ಹೇಳಲಾಗುತ್ತಿದೆ.