ಮಾಜಿ ಸಚಿವೆ, ಕಾಂಗ್ರೆಸ್ ಮುಖಂಡೆ ಎಂ.ಟಿ. ಪದ್ಮ ನಿಧನ
ಕಲ್ಲಿಕೋಟೆ: ಮಾಜಿ ಸಚಿವೆ, ಕಾಂಗ್ರೆಸ್ ಮುಖಂಡೆಯಾಗಿದ್ದ ಎಂ.ಟಿ. ಪದ್ಮ (81) ನಿಧನ ಹೊಂದಿದರು. ಮುಂಬೈಯಲ್ಲಿ ಅಂತ್ಯ ಸಂಭವಿಸಿದೆ. ಅಲ್ಲಿ ಪುತ್ರಿಯೊಂದಿಗೆ ವಾಸವಾಗಿದ್ದರು. ಮೃತದೇಹವನ್ನು ಇಂದು ಕಲ್ಲಿಕೋಟೆಗೆ ತರಲಾಗುವುದು. ಫಿಶರೀಸ್- ಗ್ರಾಮ ಅಭಿವೃದ್ಧಿ ಇಲಾಖೆ ಸಚಿವೆಯಾಗಿದ್ದರು.
ಕೇರಳದ ಸಚಿವ ಸಂಪುಟದಲ್ಲಿ ಮೂರನೇ ಮಹಿಳಾ ಸದಸ್ಯೆಯಾಗಿದ್ದ ಇವರು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಕೆಎಸ್‌ಯುವಿನ ಮೂಲಕ ರಾಜಕೀಯಕ್ಕೆ ಕಾಲಿರಿಸಿದ್ದರು. ಬಳಿಕ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ, ಕಲ್ಲಿಕೋಟೆ ಡಿಸಿಸಿ ಕಾರ್ಯ ದರ್ಶಿ, ಕೋಶಾಧಿಕಾರಿ ಎಂಬ ನೆಲೆ ಯಲ್ಲಿ ಕಾರ್ಯಾಚರಿಸಿದ್ದರು. 1999 ರಲ್ಲಿ ಪಾಲಕ್ಕಾಡ್‌ನಿಂದ, ೨೦೦೪ರಲ್ಲಿ ವಡಗರೆಯಿಂದ ಲೋಕ ಸಭೆಗೆ ಸ್ಪರ್ಧಿಸಿದರೂ ಸೋಲನುಭವಿ ಸಿದ್ದರು. ಕೆ. ಕರುಣಾಕರನ್ ಡಿಐಸಿ ರೂಪೀಕರಿಸಿ ದಾಗ ಅದರ ಅಂಗವಾಗಿದ್ದ ಎಂ.ಟಿ. ಪದ್ಮ ಬಳಿಕ ಕಾಂಗ್ರೆಸ್‌ಗೆ ಹಿಂತಿರುಗಿದ್ದರು.