ಮಾದಕವಸ್ತು ಮೆಥಾಫಿಟಾಮಿನ್ ಸಹಿತ ಯುವಕ ಸೆರೆ

ಕಾಸರಗೋಡು: ನೀಲೇಶ್ವರ ಅಬ ಕಾರಿ ರೇಂಜ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಎನ್.ವೈಶಾಖ್ ನೇತೃ ತ್ವದ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕವಸ್ತುವಾದ 1.74 ಗ್ರಾಂ ಮೆಥಾಫಿಟಾಮಿನ್ ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ನೀಲೇಶ್ವರ ಕಣಿಚ್ಚಿರದ ಮೊಹಮ್ಮದ್ ನೌಫಲ್ ಎನ್.ಎನ್ (26) ಎಂಬಾ ತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆ ಕ್ಟರ್ (ಗ್ರೇಡ್) ಅನೀಶ್ ಕುಮಾರ್ ಕೆ, ಪ್ರಿವೆಂಟೀವ್ ಆಫೀಸರ್ ಸತೀಶನ್ ನಾಲುಪುರಕ್ಕಲ್, ಪ್ರಜಿತ್ ಕುಮಾರ್ ಕೆ.ವಿ, ಸಿಇಒಗಳಾದ ಸುಧೀರ್ ಪಾರಮ್ಮಲ್, ನಸರುದ್ದೀನ್ ಎ.ಕೆ, ಶೈಲೇಶ್ ಕುಮಾರ್ ಮತ್ತು ಚಾಲಕ ರಾಜೀವನ್ ಪಿ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

You cannot copy contents of this page