ಕಾಸರಗೋಡು: ಚೆಂಗಳ ಚೂರಿ ಮೂಲೆ ಜಂಕ್ಷನ್‌ನಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಡಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.856 ಗ್ರಾಂ ಮೆಥಾಫಿಟಾಮಿನ್ ಮಾದಕವಸ್ತು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಚೂರಿಮೂ ಲೆಯ ಕ್ವಾಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಮೊಹಮ್ಮದ್ ರಫೀಕ್ (35) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ (ಗ್ರೇಡ್) ಗಳಾದ ಸಂತೋಷ್ ಕುಮಾರ್ ವಿ.ವಿ, ಜನಾರ್ದನನ್ ಕೆ.ಎ, ಐ.ಬಿ ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ದೀಪು ಬಿ.ಎಲ್, ಚಾಲ್ಸ್ ಜೋಸ್ ಮತ್ತು ಗೀತಾ ಟಿ.ವಿ ಎಂಬಿವರು ಒಳಗೊಂಡಿದ್ದರು.