ಮಾದಕ ದ್ರವ್ಯ, ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು: ಕೂಡ್ಲು ಕಾಂತಿಕೆರೆಯ ಮನೆಯೊಂದರಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 23 ಗ್ರಾಂ ಮೆತಾಫಿಟಾ ಮಿನ್ ಮತ್ತು 10 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಕಾಂತಿಕೆರೆಯ ಮೊಹಮ್ಮದ್ ಹನೀಫ್ ಕೆ. (32) ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖ ಲಿಸಲಾಗಿದೆ.

ಕಾಸರಗೋಡು ಎಕ್ಸೈಸ್ ಎಸನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಅಮಲ್‌ರಾಜ್‌ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್‌ಗಳಾದ ಜೇಮ್ಸ್ ಅಬ್ರಹಾಂ ಕುರ‍್ಯಾ (ಗ್ರೇಡ್) ಜನಾರ್ದನನ್ ಕೆ.ಎ., ಪ್ರಿವೆಂಟೀವ್  ಆಫೀಸರ್‌ಗಳಾದ (ಗ್ರೇಡ್) ನೌಶಾದ್ ಎ.ಎಂ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ನಾಸರುದ್ದೀನ್ ಎ.ಕೆ, ಸೋನು ಸೆಬಾಸ್ಟಿಯನ್, ಅರುಣ್ ಆರ್.ಕೆ, ಫಸೀಲಾ ಟಿ, ಚಾಲಕರಾದ ಕ್ರಿಸ್ಟಿನ್ ಪಿ.ಎ. ಮತ್ತು ವಿಜಯನ್, ಪಿ.ಎಸ್ ಎಂಬಿವರು ಒಳಗೊಂಡಿದ್ದರು.

You cannot copy contents of this page