ಮಾನಭಂಗ ತಡೆಯಲು ಯತ್ನಿಸಿದ ಯುವತಿಯ ತಲೆಗೆ ಬಡಿದು ಕೊಲೆಗೆತ್ನ: ಆರೋಪಿ ಸೆರೆ

ಕಾಸರಗೋಡು: ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದ ಮಧ್ಯೆ ಅಲೆಮಾರಿ ಯುವತಿಯನ್ನು ಹಿಡಿದು ಮಾನಭಂಗಪಡಿಸಿ ಹತ್ಯೆಗೈಯ್ಯಲು ಯತ್ನಿಸಿದ  ಆರೋಪಿ ಸೆರೆಯಾಗಿದ್ದಾನೆ. ಪಾಣತ್ತೂರು ನಿವಾಸಿಯಾದ ರಮೀಸ್ (34)ನನ್ನು ರಾಜಪುರಂ ಪೊಲೀಸರು ವಶಕ್ಕೆ ತೆಗೆದಿದ್ದಾರೆ.  ನಿನ್ನೆ ಮಧ್ಯಾಹ್ನ ಪಾಣತ್ತೂರಿನಲ್ಲಿ ಘಟನೆ ನಡೆದಿದೆ.  ಗುಜರಿ ಸಾಮಗ್ರಿಗಳನ್ನು ಹೆಕ್ಕುತ್ತಿದ್ದ ಮಧ್ಯೆ ಅಲ್ಲಿಗೆ ತಲುಪಿದ ರಮೀಸ್ ಯುವತಿಯನ್ನು  ಹಿಡಿದೆಳೆದನೆಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯುವತಿ ತನ್ನ ಕೈಯಲ್ಲಿದ್ದ  ಕಬ್ಬಿಣದ ಸರಳಿನಿಂದ ತಡೆಯಲು ಯತ್ನಿಸಿದ್ದಾಳೆ. ಇದರಿಂದ ರೋಷ ಗೊಂಡ ರಮೀಸ್ ಅದೇ ಸರಳನ್ನು ಹಿಡಿದೆಳೆದು  ಯುವತಿಯ ತಲೆಗೆ ಬಡಿದಿರುವುದಾಗಿ ಪೊಲೀಸರು ತಿಳಿ ಸಿದ್ದಾರೆ. ಬೊಬ್ಬೆ ಕೇಳಿ ಸ್ಥಳಕ್ಕೆ ತಲು ಪಿದವರು ಯುವತಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಯುವತಿಯ ತಲೆಗೆ ೫ ಹೊಲಿಗೆ ಹಾಕಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ

RELATED NEWS

You cannot copy contents of this page