ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಳವು ಆರೋಪಿಗಳನ್ನು ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹ

ಮಾನ್ಯ:  ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಳವು ನಡೆಸಿದ  ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗಳನ್ನು ಪೊಲೀಸರು ನಿನ್ನೆ ಭಜನಾ ಮಂದಿರಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸಿದರು. ಬಂಬ್ರಾಣ ದ ಇಬ್ರಾಹಿಂ ಖಲಂದರ್ (42), ಕರ್ನಾಟಕ ಉಳ್ಳಾಲದ  ಫೈಸಲ್ (30) ಎಂಬಿವರನ್ನು  ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ.  ಈ ತಿಂಗಳ ೪ರಂದು ಮುಂಜಾನೆ ವೇಳೆ ಭಜನಾ ಮಂದಿರದಿಂದ ಕಳವು ನಡೆಸಲಾಗಿದೆ. ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು   ಆರು ಲಕ್ಷರೂಪಾಯಿ ಮೌಲ್ಯವುಳ್ಳ  ದೇವರ ಬೆಳ್ಳಿಯ ಛಾಯಾಚಿತ್ರ, ಫಲಕ, ಬೆಳ್ಳಿಯ ರುದ್ರಾಕ್ಷಿ ಮಾಲೆ   ಹಾಗೂ ಎರಡು ಗ್ರಾಂ ತೂಕದ ಲಾಕೆಟ್‌ಗಳನ್ನು ಕಳವು ನಡೆಸಲಾಗಿತ್ತು.  ಈ ಪ್ರಕರಣದಲ್ಲಿ  ಒಟ್ಟು ೫ ಮಂದಿ ಆರೋಪಿಗಳಿರುವುದಾಗಿ ತಿಳಿದು ಬಂದಿದ್ದು, ಇನ್ನೂ ಮೂವರನ್ನು ಸೆರೆಹಿಡಿಯಲು ಬಾಕಿಯಿದೆ. ನೆಲ್ಲಿಕಟ್ಟೆ ಗುರುಮಂದಿರದಿಂದಲೂ  ಅದೇ ದಿನ ಕಳವು ನಡೆದಿತ್ತು. ಕಚೇರಿಯ ಬಾಗಿಲು  ಮುರಿದು ಒಳನುಗ್ಗಿದ ಕಳ್ಳರು  ಕಪಾಟಿ ನಿಂದ ೨೫ ಸಾವಿರ ರೂಪಾಯಿಗಳನ್ನು ದೋಚಿದ್ದರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page