ಮಾರಕಾಯುಧಗಳ ಸಹಿತ ಕಳವಿಗೆ ತಲುಪಿದ ತಂಡದ ಇಬ್ಬರ ಬಂಧನ: ಬಂಧಿತರ ಪೈಕಿ ಓರ್ವ 15 ಕೇಸುಗಳಲ್ಲಿ ಆರೋಪಿ; ಪರಾರಿಯಾದವರು ಸೂತ್ರಧಾರರು
ಮಂಜೇಶ್ವರ: ಮಾರಕಾಯು ಧಗಳ ಸಹಿತ ಕಳವಿಗೆ ತಲುಪಿದ ಕುಖ್ಯಾತ ತಂಡದ ಇಬ್ಬರು ಸೆರೆಗೀಡಾಗಿದ್ದು, ಓಡಿ ಪರಾರಿಯಾದ ಇತರ ನಾಲ್ಕು ಮಂದಿಗಾಗಿ ಪೊಲೀ ಸರು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳು ತಲುಪಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಕಳವಿಗೆ ಬಳಸುವ ಉಪಕರ ಣಗಳು ಹಾಗೂ ಭಾರೀ ಮಾರಕಾ ಯುಧಗಳು ಪತ್ತೆಯಾಗಿದೆ. ನಿನ್ನೆ ಮುಂಜಾನೆ ವೇಳೆ ದೈಗೋಳಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಕರ್ನಾಟಕದ ತುಮಕೂರು ಜಿಲ್ಲೆ ಸಿರಾ ಗ್ರಾಮದ ಮೊಹಲ್ಲ ಕಚೇರಿ ಎಂಬಲ್ಲಿನ ಸಯ್ಯಿದ್ ಅಮಾನ್ (22), ಮಂಗಳೂರು ಉಳ್ಳಾಲ ಕೋಡಿ ಹೌಸ್‌ನ ಫೈಸಲ್ (36) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಓಡಿ ಪರಾರಿಯಾದ ಆರೋಪಿಗಳ ಕುರಿತಾಗಿ ಮಾಹಿತಿ ಲಭಿಸಿದ್ದು, ಅವರಿಗಾಗಿ ಶೋಧ ಮುಂದುವರಿಸ ಲಾಗಿದೆ ಯೆಂದು ಮಂಜೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೊಡ್ಲಮೊಗರು ದೈಗೋಳಿಯಲ್ಲಿ ನಿನ್ನೆ ಮುಂಜಾನೆ ವೇಳೆ ಸಿಐ ಅನೂಬ್ ನೇತೃತ್ವದ ಪೊಲೀಸರು ಹಾಗೂ ನಾಗರಿಕರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಕಳ್ಳರು ಪತ್ತೆಯಾಗಿದ್ದಾರೆ. ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಗರಿಕರ ಸಹಾಯದೊಂದಿಗೆ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವಿಕೆ ತೀವ್ರಗೊಳಿಸಿದ್ದರು.
ಇದೇ ಸಂದರ್ಭದಲ್ಲಿ ಕುಖ್ಯಾತ ಕಳ್ಳರು ಮಂಜೇಶ್ವರ ಭಾಗಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಿಂದ ಪೊಲೀಸರು ತೀವ್ರ ನಿಗಾ ವಹಿಸುತ್ತಿದ್ದಂತೆ ನಿನ್ನೆ ಮುಂಜಾನೆ ನಂಬ್ರ ಪ್ಲೇಟಿಲ್ಲದ ಕಾರು ಮಜೀರ್ಪಳ್ಳಕ್ಕೆ ತಲುಪಿತ್ತು. ಕಾರಿನ ಮೇಲೆ ಸಂಶಯಗೊಂಡ ಪೊಲೀಸರು ಹಾಗೂ ನಾಗರಿಕರು ಅದನ್ನು ಹಿಂಬಾಲಿಸಿ ದೈಗೋಳಿಯಲ್ಲಿ ಕಾರಿಗೆ ತಡೆಯೊಡ್ಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ತಂಡ ನಾಗರಿಕರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಇಬ್ಬರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾ ಗಿದ್ದಾರೆ. ಇದೇ ವೇಳೆ ಸೆರೆಗೀಡಾದ ಇಬ್ಬರ ಪೈಕಿ ಓರ್ವನ ವಿರುದ್ಧ ಕರ್ನಾಟಕದಲ್ಲಿ ೧೫ ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಉಳ್ಳಾಲ ಕೋಡಿ ಹೌಸ್‌ನ ಫೈಸಲ್ ವಿರುದ್ಧ ಇಷ್ಟು ಕೇಸುಗಳಿವೆ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಕೇರಳದಲ್ಲಿ ಕೇಸುಗಳಿರುವ ಬಗ್ಗೆ ತಿಳಿದು ಬಂದಿಲ್ಲ. ಬಂಧಿತ ಆರೋಪಿಗಳನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ತೆಗೆದು ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪರಾರಿಯಾದ ನಾಲ್ಕು ಮಂದಿ ಪೈಕಿ ಓರ್ವ ಕಳವಿನ ಸೂತ್ರಧಾರನಾಗಿದ್ದಾನೆ ನ್ನಲಾಗಿದೆ. ಬಂಧಿತ ಆರೋಪಿಗಳು ತನಿಖೆ ವೇಳೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆನ್ನ ಲಾಗಿದೆ. ಆರೋಪಿಗಳು ಸಂಚರಿಸಿದ ಕಾರಿನಲ್ಲಿ ನಂಬ್ರ ಪ್ಲೇಟಿ ಅಳವಡಿಸಿರ ಲಿಲ್ಲ. ಅದನ್ನು ಕೂಡಾ ಎಲ್ಲಿಂದಲೋ ಕಳವು ನಡೆಸಿರಬಹುದೆಂದು ಅಂದಾಜಿಸಲಾಗಿದೆ.
ಕಾರಿನಿಂದ ನಕಲಿ ನಂಬ್ರ ಪ್ಲೇಟ್‌ಗಳು, ಗ್ಯಾಸ್ ಕಟ್ಟರ್‌ಗಳು, ಆಕ್ಸಿಜನ್ ಸಿಲಿಂಡರ್, ತಲವಾರು, ಪಿಕ್ಕಾಸು ಮೊದಲಾದ ಮಾರಕಾಯುಧಗಳು ಪತ್ತೆಯಾಗಿವೆ. ಜನರ ಮೇಲೆ ದಾಳಿ ನಡೆಸುವ ಉದ್ದೇಶವೂ ತಂಡ ಹೊಂದಿತ್ತೆಂದು ಇದರಿಂದ ಸಂಶಯಿಸಲಾಗುತ್ತಿದೆ. ಪರಾರಿಯಾದ ಆರೋಪಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದರೆ ಮಾತ್ರವೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಿದೆಯೆಂದು ಪೊಲೀಸರು ತಿಳಿಸಿದ್ದಾರೆ.