ಮಾಲಕನಿಗೆ ತಿಳಿಯದೆ ರಬ್ಬರ್ ತೋಟದಿಂದ ಟ್ಯಾಪಿಂಗ್: 5 ಮಂದಿ ವಿರುದ್ಧ ಕೇಸು
ಪೈವಳಿಕೆ: ಮಾಲಕ ತಿಳಿಯದಂತೆ ರಬ್ಬರ್ ತೋಟಕ್ಕೆ ನುಗ್ಗಿ ರಬ್ಬರ್ ಟ್ಯಾಪಿಂಗ್ ನಡೆಸಿರುವುದಾಗಿ ದೂರಲಾಗಿದೆ. ಪೈವಳಿಕೆ ಕಯ್ಯಾರಿನ ಪ್ರಿನ್ಸಿ ಡಿಸೋಜ ನೀಡಿದ ದೂರಿನಂತೆ ಪೆರ್ಲ ಇಡಿಯಡ್ಕದ ಅಶ್ರಫ್ ಹಾಗೂ ಇತರ ನಾಲ್ಕು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ದೂರು ದಾರೆಯ ಪತಿ ವೋಲ್ಟರ್ ಡಿಸೋಜಾರ ಹೆಸರ ಲ್ಲಿರುವ ಬದಿಯಡ್ಕ ಚಾಲಕ್ಕಾಡ್ ರಬ್ಬರ್ ತೋಟದಲ್ಲಿ ಘಟನೆ ನಡೆದಿದೆ. ನವೆಂಬರ್ 7ರಂದು ಹಾಗೂ ಅದಕ್ಕಿಂತ ಮುಂಚಿತ ಒಂದು ವಾರ ಕಾಲ ಅತಿಕ್ರಮಿಸಿ ನುಗ್ಗಿ ರಬ್ಬರ್ ಟ್ಯಾಪಿಂಗ್ ನಡೆಸಿ 30,000 ರೂ. ಸ್ವಾಧೀನಪಡಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ದೂರು ದಾರೆಯ ಪತಿ ಕೊಲ್ಲಿ ಯಲ್ಲಿದ್ದು, ಈಕೆಯ ಸಹೋದರ ರಬ್ಬರ್ ತೋಟವನ್ನು ನಡೆಸುತ್ತಿದ್ದರು. ಇವರಿಗೆ ಅಸೌಖ್ಯದ ಹಿನ್ನೆಲೆಯಲ್ಲಿ ಒಂದು ವಾರದಿಂದ ತೋಟಕ್ಕೆ ಹೋಗಿರ ಲಿಲ್ಲ ಎನ್ನಲಾಗಿದೆ. ಅದಕ್ಕಿಂತ ಮುಂಚೆ ಕಾಡು ಕಡಿದು ಟ್ಯಾಪಿಂಗ್‌ಗೆ ಸಿದ್ಧಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಅತಿಕ್ರಮಿಸಿ ನುಗ್ಗಿ ಟ್ಯಾಪಿಂಗ್ ನಡೆಸಿರುವುದಾಗಿ ಪ್ರಿನ್ಸಿ ತಿಳಿಸಿದ್ದಾರೆ.