ಮಿತ್ರಕಲಾವೃಂದ ಮಧೂರು 50ನೇ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಮಧೂರು: ಮಿತ್ರಕಲಾವೃಂದ ಮಧೂರು ಇದರ 50ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಸಂಘದ ಅಧ್ಯಕ್ಷ ಸೂರ್ಯ ಎ.ಕೆ. ಉದ್ಘಾಟಿಸಿ, ಸಂಘವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾರಂಗದಲ್ಲಿ ತೋರ್ಪಡಿ ಸಿದ ಯಶಸ್ಸಿನ ಕುರಿತು ವಿವರಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ವರದಿ, ಕೋಶಾಧಿಕಾರಿ ಸುಜಿತ್ ಕೆ.ಸಿ. ಲೆಕ್ಕಪತ್ರ ಮಂಡಿಸಿದರು. ಸಂಘದ ಸದಸ್ಯರಾದ ಚಂದ್ರಹಾಸ ಕೆ. ಶುಭಾಶಂ ನೆಗೈದರು. ಸಂಘದ ೫೦ನೇ ವಾರ್ಷಿ ಕೋತ್ಸವವನ್ನು ವಿವಿಧ ಕಲಾ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೊಂದಿಗೆ ಒಂದು ವರ್ಷ ಕಾಲ ಆಚರಿಸಲು ತೀರ್ಮಾನಿಸಲಾಯಿತು. ಸಂಘದ ವತಿಯಿಂದ 37ನೇ ವರ್ಷದ ಚೆಸ್ ಪಂದ್ಯಾಟ ವನ್ನು ಈ ತಿಂಗಳ 10ರಂದು ಮಧೂರು ಶಾಲಾ ಪರಿಸರದಲ್ಲಿ ನಡೆ ಸಲು ನಿರ್ಧರಿಸಲಾ ಯಿತು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷರಾಗಿ ಚಂದ್ರಗೋಪಾಲ್ ಎನ್, ಉಪಾಧ್ಯಕ್ಷರಾಗಿ ಸೂರ್ಯ ಎ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಧುಕರ ಕೆ. ಗಟ್ಟಿ, ಕಲಾ ಜತೆ ಕಾರ್ಯದರ್ಶಿಯಾಗಿ ರಾಜೇಶ್ ಸಿ.ಎಚ್, ಕ್ರೀಡಾ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಕೋಶಾಧಿಕಾರಿ ಯಾಗಿ ಸುಜಿತ್ ಕೆ.ಸಿ. ಎಂಬಿವರನ್ನು ಆಯ್ಕೆ ಮಾಡಲಾಯಿತು. ಕಾರ್ಯ ದರ್ಶಿ ಮಧುಕರ ಕೆ. ಗಟ್ಟಿ ವಂದಿಸಿದರು.