ಮೀನು ಕಾರ್ಮಿಕರ ಪುನರ್ವಸತಿ ಯೋಜನೆ ವಸತಿ ಸಮುಚ್ಚಯ ನಿರ್ಮಾಣ ನಿಧಾನಗತಿಯಲ್ಲಿ
ಕುಂಬಳೆ: ಕೊಯಿಪ್ಪಾಡಿ ವಿಲ್ಲೇಜ್ನ ಮೀನು ಕಾರ್ಮಿಕರಿಗಾಗಿ ಜ್ಯಾರಿಗೊಳಿಸಿದ ಪುನರ್ವಸತಿ ಯೋಜನೆಯಾದ ‘ಪುನರ್ ಗೇಹಂ’ ವಸತಿ ಸಮುಚ್ಚಯದ ಕಾಮಗಾರಿ ನಿಧಾನಗತಿಯಲ್ಲೇ ಸಾಗುತ್ತಿದೆ. ಕಡಲಬ್ಬರದಿಂದ ಉಂಟಾಗುವ ಸಂಕಷ್ಟವನ್ನು ಪರಿಹರಿಸುವುದು, ಮೀನು ಕಾರ್ಮಿಕರ ಕುಟುಂಬಗಳ ಕ್ಷೇಮವನ್ನು ಕಾಪಾಡಿಕೊಳ್ಳುವ ಗುರಿಯೊಂದಿಗೆ ಬಂದರು- ಮೀನುಗಾರಿಕಾ ಇಲಾಖೆ ಜ್ಯಾರಿಗೊಳಿಸಿದ ಯೋಜನೆ ಇದಾಗಿದೆ.
ಕೊಯಿಪ್ಪಾಡಿ ಗ್ರಾಮದ ನಾರಾಯಣ ಮಂಗಲದಲ್ಲಿ 22.05 ಕೋಟಿ ರೂ. ಖರ್ಚಿನಲ್ಲಿ ವಸತಿ ಸಮುಚ್ಚಯವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 2021ರಲ್ಲಿ ಇದರ ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. 2024ರಲ್ಲಿ ಯೋಜನೆ ಪೂರ್ತಿ ಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ವರುಷ ಮೂರು ಕಳೆದರೂ ಅರ್ಧ ಕಾಮಗಾರಿ ಕೂಡಾ ಇದುವರೆಗೆ ನಡೆದಿಲ್ಲವೆಂದು ಮೀನು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಇದುವರೆಗಿನ ನಿರ್ಮಾಣ ಚಟುವಟಿಕೆಯನ್ನು ಅವಲೋಕಿಸಿದರೆ 2026 ಆದರೂ ಪೂರ್ತಿಗೊಳ್ಳುವುದು ಸಂಶಯವಾಗಿದೆ.
ಕುAಬಳೆಯಲ್ಲಿ ಮಾತ್ರ 120 ವಸತಿ ಸಮುಚ್ಚಯವನ್ನು ನಿರ್ಮಿಸಲಾ ಗುವುದು. ತಲಾ 10 ಲಕ್ಷ ರೂಪಾಯಿ ಖರ್ಚು ಅಂದಾಜಿಸುವ 120 ಫ್ಲಾಟ್ ನಿರ್ಮಿಸಲು ಸರಕಾರ ಫಂಡ್ ಮಂಜೂರು ಮಾಡಿದೆ. 480 ಚದರ ಅಡಿ ವಿಸ್ತೀರ್ಣದಲ್ಲಿ 2 ಬೆಡ್ರೂಂ, ಅಡುಗೆ ಕೋಣೆ, ಹಾಲ್, ಬಚ್ಚಲುಕೋಣೆ ಎಂಬೀ ಸೌಕರ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದಲ್ಲದೆ ಅಂಗನವಾಡಿ ಕಟ್ಟಡ, ಆವರಣಗೋಡೆ ನಿರ್ಮಾಣ, ಕುಡಿಯುವ ನೀರು ಯೋಜನೆ, ಮಲಿನ ಜಲ ಹಿರದು ಬಿಡಲಿರುವ ವ್ಯವಸ್ಥೆಯನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ವಸತಿ ಸಮುಚ್ಚಯಕ್ಕೆ ಸಮೀಪದಲ್ಲಾಗಿ ಭವಿಷ್ಯದಲ್ಲಿ ಆರೋಗ್ಯ ಕೇಂದ್ರ, ವಾಚನಾಲಯ, ಆಟದ ಮೈದಾನ ಸ್ಥಾಪಿಸಲಿರುವ ಸಾಧ್ಯತೆಯನ್ನು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಇದೀಗ ಯೋಜನೆ ಪೂರ್ತಿಗೊಳಿ ಸಲು ವಿಳಂಬವಾಗು ತ್ತಿರುವುದು ಮೀನು ಕಾರ್ಮಿಕರಲ್ಲಿ ಅಸಮಾ ಧಾನಕ್ಕೆ ಕಾರಣವಾಗಿದೆ. ಜಿಲ್ಲೆಯ ಇತರೆಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೆ ಉಂಟಾದ ಅವಸ್ಥೆ ಮೀನು ಕಾರ್ಮಿಕರ ಪುನರ್ವಸತಿ ಯೋ ಜನೆಗೂ ಉಂಟಾಗಕೂಡದೆAದು ಕಾರ್ಮಿಕರು ವಿನಂತಿಸುತ್ತಿದ್ದಾರೆ.