ಮುಂದುವರಿದ ಅಬಕಾರಿ ದಾಳಿ: ಮದ್ಯ, ಗಾಂಜಾ ವಶ
ಕಾಸರಗೋಡು: ಅಬಕಾರಿ ತಂಡ ನಡೆಸುತ್ತಿರುವ ದಾಳಿ ಜಿಲ್ಲೆಯಲ್ಲಿ ಇನ್ನೂ ಮುಂದುವರಿಯುತ್ತಿದೆ.
ಇದರಂತೆ ಜಿಲ್ಲೆಯ ವಿವಿಧೆಡೆಗ ಲ್ಲಾಗಿ ಅಬಕಾರಿ ತಂಡ ನಡೆಸಿದ ದಾಳಿಂiiಲ್ಲಿ ಪತ್ತೆಹಚ್ಚಿ ವಶಪಡಿಸ ಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಮೂರು ದ್ವಿಚಕ್ರ ವಾಹ ನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾಸರಗೋಡು ಅಬಕಾರಿ ರೇಂಜ್ ಕಚೇರಿಯಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಶಿಜು ಇ.ಟಿ ನೇತೃತ್ವದ ಅಬಕಾರಿ ತಂಡ ಪೊಯಿನಾಚಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾ ಣಕ್ಕಿಂತ ಹೆಚ್ಚು ಮದ್ಯಕೈವಶವಿರಿಸಿದ ಪನಯಾಲ ನೆಲ್ಲಿಯಡ್ಕದ ಚಂದ್ರಮೋಹನ್ ಎಂಬವರನ್ನು ವಶಕ್ಕೆ ತೆಗೆದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ಸಂಚರಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ರಾಜೀವನ್, ಸಿಐಒಗಳಾದ ರಾಜೇಶ್ ಪಿ, ಮುರಳೀಧರನ್ ಎಂ ಎಂಬಿವರು ಒಳಗೊಂಡಿದ್ದರು.
ಇದೇ ರೀತಿ ಹೊಸದುರ್ಗ ತಾಲೂಕಿನ ಪಿಲಿಕೋಡ್‌ನಲ್ಲಿ ತೃಕ್ಕರಿಪುರ-ಪಿಲಿಕೋಡ್ ರಸ್ತೆ ಬ ಳಿ ನೀಲೇಶ್ವರ ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ಗೋಪಿ ಕೆ ನೇತೃತವದ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಸ್ಕೂಟರ್‌ನಲ್ಲಿ ಬಚ್ಚಿಡಲಾಗಿದ್ದ 2.5 ಲೀಟರ್ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕರಿವೆಳ್ಳೂರಿನ ಮಧು ಪಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನೀಲೇಶ್ವರ ಅಬಕಾರಿ ರೇಂಜ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿಜಿನ್ ಕುಮಾರ್ ನೇತೃತ್ವದ ಅಬಕಾರಿ ತಂಡ ಚೆರ್ವತ್ತೂರು ರೈಲು ನಿಲ್ದಾಣ ಪರಿಸರ ದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಇದಕ್ಕೆ ಸಂಬಂ ಧಿಸಿ ಪಿಲಿಕೋಡು ಮಡಿಯನ್ ನಿವಾಸಿ ಪ್ರಜೀಶ್ ಪಿ (41) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಬದಿಯಡ್ಕ ಗ್ರಾಮದ ಮುಡಿಪ್ಪಿನಡ್ಕದಲ್ಲಿ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ದಿನೇಶನ್ ಕೆ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 5.4 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ವಿದ್ಯಾಗಿರಿಯ ಶಶಿ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಉಪಯೋಗಿಸಲಾದ ದ್ವಿಚಕ್ರ ವಾಹನವನ್ನು ಅಬಕಾರಿ ತಂಡ ವಶಪಡಿಸಿ ಕೊಂಡಿದೆ.ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಮನೋಜ್ ಪಿ, ಜೋನ್ಸನ್ ಪೋಲ್, ವಿನೋದ್ ಕೆ ಮತ್ತು ಅಶ್ವತಿ ವಿ.ವಿ ಎಂಬವರು ಒಳಗೊಂಡಿದ್ದರು.