ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹೇಳಿಕೆಯಿಂದ ಯು-ಟರ್ನ್ ಹೊಡೆದ ದೇವೇಗೌಡ
ಬೆಂಗಳೂರು: ಕರ್ನಾಟಕದಲ್ಲಿ ಜೆಡಿ ಎಸ್- ಬಿಜೆಪಿ ಮೈತ್ರಿ ಮುಂದುವರಿಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪೂರ್ಣ ಒಪ್ಪಿಗೆ ನೀಡಿ ದ್ದರು ಎಂದು ಹೇಳುವ ಮೂಲಕ ರಾಜಕೀ ಯ ಬಿರುಗಾಳಿಯನ್ನು ಹುಟ್ಟುಹಾಕಿದ ಕೆಲವೇ ಗಂಟೆಗಳ ನಂತರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಮ್ಮ ಆ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿಗೆ ಕೇರಳ ಮುಖ್ಯಮಂತ್ರಿ ಬೆಂಬಲಿಸಿದ್ದಾರೆ ಮತ್ತು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ನಾನು ಎಂದಿಗೂ ಹೇಳಿಲ್ಲ. ಎಂದು ಹೇಳುವ ಮೂಲಕ ದೇವೇಗೌಡರು ಮೊನ್ನೆ ಸಂಜೆ ನೀಡಿದ ತಮ್ಮ ಹಿಂದಿನ ಹೇಳಿಕೆಯನ್ನು ಹಿಂತೆಗೆದು ಅದರಿಂದ ಈಗ ಯು-ಟರ್ನ್ ಹೊಡೆದಿದ್ದಾರೆ.
ಸಿಪಿಎಂ ಬಗ್ಗೆ ನನ್ನ ಹೇಳಿಕೆಯಲ್ಲಿ ಕೆಲವು ಗೊಂದಲಗಳಿವೆ. ನನ್ನ ಕಮ್ಯೂನಿಸ್ಟ್ ಸ್ನೇಹಿತರು ನಾನು ಹೇಳಿದ್ದೇನು ಅಥವಾ ನಾನು ಹೇಳಿದ ಸಂದರ್ಭವನ್ನು ಅನುಸರಿಸಿದಂತೆ ಕಾಣುತ್ತಿಲ್ಲ. ಕೇರಳದಲ್ಲಿ ಸಿಪಿಎಂ ಪಕ್ಷವು ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುತ್ತಿದೆ ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಗೌಡರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಯೊಂದಿಗೆ ಮೈತ್ರಿಯ ನಂತರ ಕರ್ನಾಟಕದ ಹೊರಗಿನ ನಮ್ಮ ಪಕ್ಷದ ಘಟಕದೊಳಗಿನ ವಿಷಯಗಳು ಬಗೆಹರಿಯದಿದ್ದರೂ, ಕೇರಳದಲ್ಲಿ ನಮ್ಮ ಪಕ್ಷ ಎಲ್‌ಡಿಎಫ್ ಸರಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಮಾತ್ರ ನಾನು ಹೇಳಿದ್ದೆ ಎಂಬುದಾಗಿ ಗೌಡರು ಹೇಳಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಗೆ ನಾನು ಸಂಪೂರ್ಣ ಒಪ್ಪಿಗೆ ನೀಡಿದ್ದೆ ಎಂದು ದೇವೇಗೌಡರು ನೀಡಿದ್ದ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾರಸಗಟಾಗಿ ನಿರಾಕರಿಸಿದ್ದು, ಅದರ ಹೆಸರಲ್ಲಿ ಗೌಡರ ವಿರುದ್ಧ ಗರಂ ಗೊಂಡು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಹೇಳಿಕೆ ನಿರಾಧಾರಿ ತವಾದದ್ದು. ಅದು ಸತ್ಯವಲ್ಲ. ಅವರು ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ದೇವೇಗೌಡರ ಹೇಳಿಕೆಗೆ ಕೇರಳದ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಮಾತ್ರವಲ್ಲ ಇದು ಬಿಜೆಪಿ ಮತ್ತು ಸಿಪಿಎಂ ನಡುವಿನ ರಹಸ್ಯ ಸಂಬಂಧವನ್ನು ಹೊರ ತಂದಿದೆ ಎಂದು ಕಾಂಗ್ರೆಸ್ ಹೇಳಿದೆ.
ಜೆಡಿಎಸ್‌ನ ಕೇರಳ ಘಟಕ ಅಧ್ಯಕ್ಷ ಮ್ಯಾಥ್ಯು ಟಿ. ಥೋಮಸ್ ಮತ್ತು ಆ ಪಕ್ಷದ ಸಚಿವ ಕೃಷ್ಣನ್ ಕುಟ್ಟಿ ಅವರೂ ಗೌಡರ ಹೇಳಿಕೆಯನ್ನು ಸಾರಾ ಸಗಟಾಗಿ ನಿರಾಕರಿಸಿದ್ದು, ಕೇರಳದಲ್ಲಿ ನಾವು ಎಡರಂಗದ ಘಟಕ ವಾಗಿಯೇ ಇನ್ನೂ ಮುಂದುವರಿಯುವೆವು. ಈ ವಿಷಯದಲ್ಲಿ ನಾವು ನಮ್ಮದೇ ಆದ ಸ್ವತಂತ್ರ ನಿಲುವು ತಾಳಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.