ಮುದಲಮಡದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಹಾಗೂ ಸಂಬಂಧಿಕ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ನಿಗೂಢತೆ
ಪಾಲಕ್ಕಾಡ್: ಕೊಲ್ಲಂಗೋಡ್ ಮುದಲಮಡದಲ್ಲಿ ಶಾಲಾ ವಿದ್ಯಾರ್ಥಿನಿ ಹಾಗೂ ಸಂಬಂಧಿಕನಾದ ಯುವಕ ವಿಭಿನ್ನ ಸ್ಥಳಗಳಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಪತ್ತಿಚ್ಚಿರ ನಿವಾಸಿ ಅಯ್ಯಪ್ಪನ್ ಪುತ್ರಿ ಅರ್ಚನ (15), ಮನೆಯ ಕಿಟಿಕಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅರ್ಚನಳ ಸಂಬಂಧಿ ಕನಾದ ಕೃಷ್ಣನ್‌ರ ಪುತ್ರ ಗಿರೀಶ್ (22)ನನ್ನು ಚುಳ್ಳಿಯಾರ್ ಡ್ಯಾಮ್ ಮಿನುಕ್ಕಂಪಾರ ಸಮೀಪ ಅರಣ್ಯ ಇಲಾಖೆಯ ವ್ಯಾಪ್ತಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಮುದಲ ಮಡ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿಯಾಗಿ ದ್ದಾಳೆ ಅರ್ಚನ. 10ನೇ ತರಗತಿ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದ ಮಧ್ಯೆ ಈಕೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಅರ್ಚನಳ ತಾಯಿಯ ಸಹೋದರನ ಮಗನಾಗಿದ್ದಾನೆ ಕೊಟ್ಟಪ್ಪಳ್ಳಂ ನಿವಾಸಿಯಾದ ಗಿರೀಶ್. ನಿನ್ನೆ ಸಂಜೆ 5.30ಕ್ಕೆ ಇವರಿಬ್ಬರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಹೆತ್ತವರು ಕೆಲಸಕ್ಕೆ ಹೋದ ಸಮಯದಲ್ಲಿ ಅರ್ಚನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ. ಚಿಟ್ಟೂರು ಡಿವೈಎಸ್‌ಪಿ ಕೃಷ್ಣದಾಸ್, ಕೊಲ್ಲಂಗೋಡು ಎಸ್‌ಎಚ್‌ಒ ಸಿ.ಕೆ. ರಾಜೇಶ್ ಎಂಬಿವರು ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಗಿರೀಶ್ ತನಗೆ ಉಪಟಳ ನೀಡುತ್ತಿದ್ದುದಾಗಿ ಅರ್ಚನ ಎರಡು ದಿನದ ಹಿಂದೆ ಕೊಲ್ಲಂಗೋಡ್ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಗಿರೀಶ್ ಹಾಗೂ ಹೆತ್ತವರನ್ನು ಕರೆದು ತಾಕೀತು ನೀಡಿದ್ದರು. ಇದರ ಬಳಿಕ ಮತ್ತೊಮ್ಮೆ ಗಿರೀಶ್ ವಿದ್ಯಾರ್ಥಿನಿಯ ಮನೆ ಪರಿಸರದಲ್ಲಿ ಕಂಡಿರುವುದಾಗಿಯೂ ಸಮೀಪವಾಸಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಇಂದು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದ್ದು, ಆ ಬಳಿಕವೇ ಅರ್ಚನಳ ಸಾವಿಗೆ ಕಾರಣ ಖಚಿತಪಡಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ, ಅನಿತ ಅರ್ಚನಳ ಸಹೋದರಿ ಯರಾಗಿದ್ದು, ಪುಷ್ಪಾವತಿ ಗಿರೀಶ್‌ನ ತಾಯಿ ಹಾಗೂ ಗಿರಿಜಾ, ಗ್ರೀಷ್ಮ ಸಹೋದರಿಯರಾಗಿದ್ದಾರೆ.