ಮುಳ್ಳುಹಂದಿ ಆಕ್ರಮಣ : ಪ್ಲಸ್‌ಟು ವಿದ್ಯಾರ್ಥಿಗೆ ಗಾಯ
ಕಣ್ಣೂರು: ವಟ್ಟಿಪುರಂ ವೆಳ್ಳಾನಪೊಯಿಲ್‌ನಲ್ಲಿ ಮುಳ್ಳುಹಂದಿಯ ಆಕ್ರಮಣದಿಂದ ವಿದ್ಯಾರ್ಥಿ ಗಾಯಗೊಂಡನು. ಪ್ಲಸ್‌ಟು ವಿದ್ಯಾರ್ಥಿಯಾದ ವಟ್ಟಿಪುರ ಬಳಿಯ ಮಾಣಿಕ್ಕೋತ್ ವಯಲ್ ನಿವಾಸಿ ಮುಹಮ್ಮದ್ ಶಾದಿಲ್ ಗಾಯಗೊಂಡಿರುವುದು. ನಿನ್ನೆ ಮುಂಜಾನೆ ಮಸೀದಿಯಿಂದ ತಂದೆಯ ಜೊತೆ ಹಿಂತಿರುಗುವಾಗ ಮುಳ್ಳುಹಂದಿ ಆಕ್ರಮಣ ನಡೆಸಿದೆ. ಇದರಿಂದ ಇವರು ಸಂಚರಿಸಿದ ಸ್ಕೂಟರ್ ಮಗುಚಿತ್ತು. ಶಾಲಿದ್‌ನ ಶರೀರದಲ್ಲಿ 12ರಷ್ಟು ಮುಳ್ಳುಗಳು ಚುಚ್ಚಿಕೊಂಡಿವೆ. ಅಂಗೈಯಲ್ಲಿ ಚುಚ್ಚಿದ ಮುಳ್ಳು ಇನ್ನೊಂದು ಬದಿಯಿಂದ ಹೊರಬಂದಿದೆ. ವಿದ್ಯಾರ್ಥಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.