ಮುಳ್ಳೇರಿಯದಿಂದ 4.76 ಕೋಟಿ ರೂ. ಸಹಿತ ತಲೆಮರೆಸಿಕೊಂಡ ಸಿಪಿಎಂ ನೇತಾರ ಬೆಂಗಳೂರಿನಲ್ಲಿರುವುದಾಗಿ ಸೂಚನೆ
ಮುಳ್ಳೇರಿಯ: ಸದಸ್ಯರಿಗೆ ತಿಳಿಯದೆ ಅವರ ಹೆಸರಲ್ಲಿ 4.76 ಕೋಟಿ ರೂಪಾಯಿಗಳ ಚಿನ್ನಾಭರಣ ಸಾಲ ತೆಗೆದು ತಲೆಮರೆಸಿಕೊಂಡ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಯಾದ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ಬೆಂಗಳೂರಿನಲ್ಲಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ಪತ್ತೆಹಚ್ಚಲು ಆದೂರು ಪೊಲೀಸರು ಶೀಘ್ರದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.
ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬೆಳ್ಳೂರು ಕಿನ್ನಿಂಗಾರಿನ ಸೂಫಿ ನೀಡಿದ ದೂರಿನಂತೆ ಕರ್ಮಂ ತೋಡಿ ನಿವಾಸಿಯೂ ಸಿಪಿಎಂ ಮುಳ್ಳೇರಿಯ ಲೋಕಲ್ ಕಮಿಟಿ ಸದಸ್ಯನಾದ ಕೆ. ರತೀಶ್ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇಲಾಖೆ ಮಟ್ಟದ ಪರಿಶೀಲನೆಯಲ್ಲಿ ಕೋಟ್ಯಂ ತರ ರೂಪಾಯಿಗಳ ವಂಚನೆ ನಡೆದಿರುವುದು ಪತ್ತೆಹಚ್ಚಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ 4,75,99,907 ರೂಪಾಯಿಗಳ ವಂಚನೆ ಪತ್ತೆಹಚ್ಚಲಾಗಿದೆ. ಜನವರಿ ತಿಂಗಳಿAದ ಹಲವು ಬಾರಿಯಾಗಿ ಅಡವು ಚಿನ್ನ ಇಲ್ಲದೆ 7 ಲಕ್ಷ ರೂಪಾಯಿವರೆಗೆ ಪ್ರತೀ ಸದಸ್ಯನ ಹೆಸರಲ್ಲಿ ಸಾಲ ತೆಗೆಯಲಾಗಿದೆ. ಈ ವಿಷಯ ಅರಿವಿಗೆ ಬಂದ ಹಿನ್ನೆಲೆ ಯಲ್ಲಿ ಆಡಳಿತ ಸಮಿತಿಗೆ ತಿಳಿ ಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ನಿರ್ದೇಶಿಸಲಾಯಿತು. ಇದೇ ವೇಳೆ ಒಂದು ವಾರದೊಳಗೆ ಹಣವನ್ನು ಮರಳಿ ಪಾವತಿಸುವು ದಾಗಿ ರತೀಶ್ ಕೆಲವರಲ್ಲಿ ತಿಳಿಸಿದ್ದಾರೆನ್ನಲಾಗಿದೆ. ಆದರೆ ಅಧ್ಯಕ್ಷ ದೂರು ನೀಡಿದ ಬೆನ್ನಲ್ಲೇ ಸೆಕ್ರೆಟರಿಯಾದ ರತೀಶ್ ಊರಿ ನಿಂದ ತಲೆಮರೆಸಿಕೊಂಡಿದ್ದಾರ.
ಸೈಬರ್ ಸೆಲ್ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ರತೀಶ್ ಬೆಂಗಳೂರಿನಲ್ಲಿರುವುದಾಗಿ ಸೂಚನೆ ಲಭಿಸಿದೆ. ಈ ಪ್ರಕರಣ ವನ್ನು ಕೂಡಲೇ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗುವುದೆAಬ ಸೂಚನೆಯಿದೆ.