ಮೂಸೋಡಿ ಸಮುದ್ರದಲ್ಲಿ ಅಪರಿಚಿತ ಮೃತದೇಹ ಪತ್ತೆ

ಉಪ್ಪಳ: ಮೂಸೋಡಿ ಸಮುದ್ರ ದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ದಡಕ್ಕೆ ತಲುಪಿಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತ ವ್ಯಕ್ತಿ ಯುವಕನದ್ದೆಂದು ತಿಳಿದುಬಂದಿದೆ. ದೇಹದಲ್ಲಿ ಒಳಉಡುಪು ಮಾತ್ರವೇ ಇದೆ. ಮೃತದೇಹ ಜೀರ್ಣಾವಸ್ಥೆಯ ಲ್ಲಿದ್ದು, ನಾಲ್ಕೈದು ದಿನಗಳ ಹಿಂದೆ ಸಾವಿಗೀಡಾಗಿರಬಹುದೆಂದು ಅಂದಾಜಿ ಸಲಾಗಿದೆ.  ಇಂದು ಬೆಳಿಗ್ಗೆ ಮೂಸೋಡಿ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದವರಿಗೆ ದಡದಿಂದ ೫ ನೋಟಿಕಲ್ ಮೈಲು ದೂರ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದ ಕರಾವಳಿ ಪೊಲೀಸರು ಕೂಡಾ  ಕಾರ್ಯಾಚರಣೆಗೆ ತಲುಪಿದ್ದರು.  ಸುಮಾರು ೬೦ ಮಂದಿ ಮೀನುಕಾ ರ್ಮಿಕರು ಮೀನುಗಾರಿಕೆಗಾಗಿ ತೆರಳಿ ದ್ದರು. ಅವರು ನಡೆಸಿದ ಪ್ರಯತ್ನ ದಿಂದ ಮೃತದೇಹವನ್ನು ದಡಕ್ಕೆ ತಲುಪಿಸಲು ಸಾಧ್ಯವಾಯಿತು. ಮೃತವ್ಯಕ್ತಿಯ ಗುರುತು ಹಚ್ಚಲು ಪ್ರಯತ್ನ ನಡೆ ಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page