ಇದುವರೆಗೆ ಜಿಲ್ಲೆಯಲ್ಲಿ 1501 ಮಂದಿ ಮನೆಯಲ್ಲಿ ಮತದಾನ

ಕಾಸರಗೋಡು: ಜಿಲ್ಲೆಯಲ್ಲಿ ಇದುವರೆಗೆ 1501 ಮಂದಿ ಮನೆಯಲ್ಲೇ ಮತದಾನ ಮಾಡಿದ್ದಾರೆ. 85 ವರ್ಷಕ್ಕಿಂತ ಮೇಲಿನ ಪ್ರಾಯದ 698 ಮಂದಿ, ಭಿನ್ನ ಸಾಮರ್ಥ್ಯ ದವರಾದ 800 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.  85 ವರ್ಷ ಪೂರ್ತಿಗೊಂಡ 3281, ಭಿನ್ನ ಸಾಮರ್ಥ್ಯದವರಾದ 3529 ಮಂದಿಗೆ ಜಿಲ್ಲೆಯಲ್ಲಿ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮಂಜೇಶ್ವರದಲ್ಲಿ 85 ವರ್ಷ ಮೇಲಿನ 99 ಮಂದಿ, ಭಿನ್ನ ಸಾಮರ್ಥ್ಯದ 158 ಮಂದಿ ಸೇರಿ ಒಟ್ಟು 257 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.ಕಾಸರಗೋಡಿನಲ್ಲಿ ಒಟ್ಟು 225, ಉದುಮದಲ್ಲಿ 275, ಕಾಞಂ ಗಾಡ್‌ನಲ್ಲಿ 557, ತೃಕರಿಪುರದಲ್ಲಿ 187 ಮಂದಿ ಇದುವರೆಗೆ ಮತದಾನ ಮಾಡಿದ್ದಾರೆ.

You cannot copy contents of this page