ಮೆಥಾಫಿಟಮಿನ್ ಪತ್ತೆ: ಓರ್ವನ ವಿರುದ್ಧ ಕೇಸು

ಕಾಸರಗೋಡು: ನೆಕ್ರಾಜೆ ಬದರ್ ನಗರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಮಾದಕವಸ್ತುವಾದ 0.914 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನೆಕ್ರಾಜೆ ಚೆನ್ನಡ್ಕ- ಪೊಡಿಪಳ್ಳ ಬಳಿಯ ಮೊಹಮ್ಮದ್ ಹನೀಫ್ ಕೆ. (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಸೂರಜ್ ಎನ್.ರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ. ಮತ್ತು ಇತರ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಎ.ವಿ. ಶ್ಯಾಮ್‌ಜಿತ್ ಎಂ, ಸ್ವಾತಿ ಮತ್ತು ಚಾಲಕ ಮೈಕಲ್ ಜೋಸೆಫ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

Leave a Reply

Your email address will not be published. Required fields are marked *

You cannot copy content of this page